ಪೇಜಾವರ ಶ್ರೀಗಳನ್ನು ಪುಡಿ ರಾಜಕಾರಣಿ ಎಂದ ಕಾಂಗ್ರೇಸ್‍ ಮುಖಂಡ ಬಿ.ಕೆ ಹರಿಪ್ರಸಾದ್ ಹೇಳಿಕೆ ಖಂಡನೀಯ : ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ಕಾಂಗ್ರೇಸ್‍  ಮುಖಂಡ ಬಿ.ಕೆ ಹರಿಪ್ರಸಾದ್  ಪೇಜಾವರ ಶ್ರೀಗಳನ್ನು ಪುಡಿ ರಾಜಕಾರಣಿ ಎಂಬ ಹೇಳಿಕೆಯನ್ನು ಹಿಂದೂ ಸಮಾಜ ತೀವ್ರ ಖಂಡಿಸುತ್ತದೆ.

ಈ ರೀತಿಯ ಹೇಳಿಕೆಗಳನ್ನು ನೀಡಿ ಸಂಪ್ರದಾಯ ಮತ್ತು ನಂಬಿಕೆಗಳಿಗೆ ದ್ರೋಹ ಎಸಗುತ್ತಿರುವ ಬಿ.ಕೆ ಹರಿಪ್ರಸಾದ್ ನಾಲಗೆಯನ್ನು ಹಿಡಿತದಲ್ಲಿಟ್ಟುಕೊಂಡು ಮಾತನಾಡುವುದು ಸೂಕ್ತ. ಪೂರ್ವಾಗ್ರಹ ಪೀಡಿತರಾಗಿ ಈ ರೀತಿಯಾಗಿ ಮಾತನಾಡಿ  ಸಮಾಜದಲ್ಲಿ ಶಾಂತಿ ಕೆದಡುವ ಪ್ರಯತ್ನವಿದು. ಹಿಂದೂ ಸಮಾಜಕ್ಕೆ ಪ್ರಾತಸ್ಮರಣಿಯರಾಗಿರುವ ಶ್ರೀಗಳಿಗೆ ಈ ರೀತಿಯ ಹೇಳಿಕೆ ನೀಡಿರುವುದು ಸಮಸ್ತ ಹಿಂದೂ  ಸಮಾಜಕ್ಕೆ  ಮಾಡಿರುವ ಅವಮಾನ.

ಬಿ.ಕೆ ಹರಿಪ್ರಸಾದ್ ಸ್ವಾಮಿಜೀಯವರಲ್ಲಿ ಕ್ಷಮೆಯಾಚಿಸಬೇಕು ಇಲ್ಲದಿದ್ದಲ್ಲಿ ಮುಂದೆ ನಡೆಯುವ ಎಲ್ಲಾ ಬೆಳವಣಿಗೆಗಳಿಗೆ ಅವರೇ ಕಾರಣರಾಗುತ್ತಾರೆಂದು ಈ ಮೂಲಕ ತಿಳಿಸುತ್ತೇವೆ ಎಂದು ಅವರು ಹೇಳಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top