ಅಕ್ಷಯ ಕಾಲೇಜಿನಲ್ಲಿ “ಡೆಲಿಸಿಯಾ” ಹಾಸ್ಪಿಟಲಿಟಿ ಕ್ಲಬ್ ಆತಿಥ್ಯ ಉದ್ಯಮದ ಕುರಿತು ಸಂವಾದ

ಪುತ್ತೂರು: ಪುತ್ತೂರು : ಅಕ್ಷಯ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ  ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಬಿ.ಎಚ್.ಎಸ್. ವಿಭಾಗ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ   “ಡೆಲಿಸಿಯಾ” ಹಾಸ್ಪಿಟಲಿಟಿ ಕ್ಲಬ್  ಆತಿಥ್ಯ ಉದ್ಯಮದ  ಕುರಿತು  ಸಂವಾದ ಕಾರ್ಯಕ್ರಮ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಪೆಸ್ಟ್ರಿ ಶೇಫ್ Ncl ಕ್ರೂಸ್ ಲೈನ್ ನ ಯತೀರಾಜ್ ಪೂಜಾರಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಹಾಸ್ಪಿಟಾಲಿಟಿ ಸೈನ್ಸ್  ಗ್ರಾಹಕರಿಗೆ ಆಹಾರ ಮತ್ತು ವಸತಿ ಅಗತ್ಯಗಳನ್ನು ಪೂರೈಸುವ ಸೇವಾ ಉದ್ಯಮವಾಗಿದೆ. ಹಾಸ್ಪಿಟಾಲಿಟಿ ಸೈನ್ಸ್ ನಲ್ಲಿ ವಿವಿಧ ಆಡಳಿತಾತ್ಮಕ,ವ್ಯವಸ್ಥಾಪನಾ ಅಂಶಗಳಂತಹ ವಿಭಿನ್ನ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ವಿದ್ಯಾರ್ಥಿಗಳು ಹೊಂದಬೇಕಾದ ಕೌಶಲ್ಯಗಳ  ಬಗ್ಗೆ ,ವಿಹಾರ ನೌಕಾಯಾನ   ವಲಯದಲ್ಲಿ  ಲಭ್ಯವಾಗುವ  ಉದ್ಯೋಗ  ಸಾಧ್ಯತೆ  ಮತ್ತು  ವ್ಯಾಪ್ತಿಯ ಬಗ್ಗೆ  ವಿದ್ಯಾರ್ಥಿಗಳಿಗೆ  ಸಾಕಷ್ಟು  ಮಾಹಿತಿಗಳನ್ನು ಒದಗಿಸಿದವರು.   

ಕಾಲೇಜಿನ ಆಡಳಿತಧಿಕಾರಿ ಅರ್ಪಿತ್ . ಟಿ. ಎ. ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗೆ   ಪ್ರಸ್ತುತ  ಮತ್ತು ಭವಿಷ್ಯದಲ್ಲಿ  ಧಾರಾಳವಾಗಿ ಉದ್ಯೋಗ  ಅವಕಾಶಗಳು ದೇಶದಲ್ಲಿ ಹಾಗೂ  ವಿದೇಶಗಳಲ್ಲಿ  ಲಭ್ಯವಿರುತ್ತದೆ.   ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು  ತಮ್ಮ  ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ  ಸಕಲ ಕೌಶಲ್ಯ ಗಳನ್ನು  ಕರಗತ ಮಾಡಿಕೊಳ್ಳಬೇಕು  ಎಂದು  ಸಲಹೆ ನೀಡಿದರು.































 
 

ಆಂತರಿಕ ಗುಣಮಟ್ಟದ ಭರವಸೆ ಕೋಶ ಯೋಜಕಿ ಭವ್ಯಶ್ರೀ ಶುಭ ಹಾರೈಸಿದರು. ಬಿ ಎಚ್ ಎಸ್  ವಿಭಾಗದ  ಮುಖ್ಯಸ್ಥ   ರತ್ನಾಕರ ಪ್ರಭು, ಬಿ ಎಚ್ ಎಸ್  ವಿಭಾಗದ ಉಪನ್ಯಾಸಕಿ  ಶ್ರತ  ಉಪಸ್ಥಿತರಿದ್ದರು.

ಡೆಲಿಸಿಯಾ   ಕ್ಲಬ್ ನ ಸಂಚಾಲಕ ನಂದನ್ ಪೂಜಾರಿ ಸಂಪನ್ಮೂಲ ವ್ಯಕ್ತಿಯ ಕಿರುಪರಿಚಯ ಮಾಡಿದರು. ಡೆಲಿಸಿಯಾ ಕ್ಲಬ್ ನಾಯಕನಾದ ಸಿಂಚನ್. ಬಿ. ಎಸ್ ಸ್ವಾಗತಿಸಿ, ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top