ಪುತ್ತೂರು: ಭಾರತೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಸಂಘ ದ.ಕ., ಉಡುಪಿ ಜಿಲ್ಲಾ ವಲಯ ಸಂಘಟನಾ ಪುತ್ತೂರು ಘಟಕದ ತ್ರೈಮಾಸಿಕ ಸಭೆ ಭಾನುವಾರ ಕುಂಬ್ರ ರೈತ ಸಮುದಾಯ ಭವನದಲ್ಲಿ ನಡೆಯಿತು.
ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಪಿ.ಗೌಡ ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ನ.18 ರಂದು ಗುರುವಾಯನಕೆರೆಯಲ್ಲಿ ನಡೆಯುವ ಸಂಘ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ಸಭೆಯ ಉದ್ದೇಶವಾಗಿದ್ದು, ಕಾರ್ಯಕ್ರಮಕ್ಕೆ ಹೊರಗಿನಿಂದ ಯಾವುದೇ ಫಂಡ್ ಬರುವುದಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಸದಸ್ಯರು ಧನ ಸಹಾಯ ನೀಡುವಂತೆ ಅವರು ಮನವಿ ಮಾಡಿದರು. ಈ ಕುರಿತು ಮುಂದಿನ ಸಭೆಯಲ್ಲಿ ಚರ್ಚಿಸೋಣ ಎಂದರು.
ಪುತ್ತೂರು ವಲಯ ಅಧ್ಯಕ್ಷ ನವೀನ್ ರೈ ಮಾತನಾಡಿ, ನ.18 ಕ್ಕೆ ನಡೆಯುವ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮ ಕುರಿತು ಮಾಹಿತಿ ನೀಡಿ, ಪ್ರತಿಯೊಂದು ವಲಯಕ್ಕೂ ಕಾರ್ಯಕ್ರಮ ನೀಡಲು ಅರ್ಧ ಗಂಟೆ ಸಮಯಾವಕಾಶ ಇದೆ. ಕಾರ್ಯಕ್ರಮದಲ್ಲಿ ಸೈನಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಬೇಕು. ಈ ಕುರಿತು ಮುಂದಿನ ಸಭೆಯಲ್ಲಿ ಚರ್ಚಿಸುವ ಕುರಿತು ನಿರ್ಧರಿಸೋಣ ಎಂದರು.
ಸಂಘದ ಬಾಲಕೃಷ್ಣ ಹಿಂದಿನ ಸಭೆಯ ವರದಿ ಮಂಡಿಸಿದರು. ಪುತ್ತೂರು ವಲಯದ ಕೋಶಾಧಿಕಾರಿ ಶಂಕರ್ ಎನ್. ಲೆಕ್ಕಪತ್ರ ಮಂಡನೆ ಮಾಡಿದರು.
ವಲಯ ಕಾರ್ಯದರ್ಶಿ ವಿದೀಪ್ ಕುಮಾರ್ ದ.ಕ., ಉಡುಪಿ ವಲಯದಲ್ಲಿ ಸುಮಾರು 87 ಸದಸ್ಯರು ಆ್ಯಕ್ಟಿವ್ ಆಗಿದ್ದಾರೆ. ಮುಂದೆ ಜಿಲ್ಲಾ ಸಮಿತಿ ಸಭೆ ನಡೆಯಲಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಕ್ರೀಡಾಧಿಕಾರಿ, ಸಂಘದ ರಘುನಾಥ ಶೆಟ್ಟಿ, ಬಾಲಕೃಷ್ಣ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಗಲಿದ ಯೋಧರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಂಘದ ಬಾಲಕೃಷ್ಣ ಸವಣೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.