ಉಪ್ಪಿನಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಪುತ್ತೂರು-ಉಪ್ಪಿನಂಗಡಿ ವಲಯ ತಂಡಗಳ ಸಕ್ರಿಯ ಸದಸ್ಯರ ತರಬೇತಿ ಕಾರ್ಯಗಾರ ಉಪ್ಪಿನಂಗಡಿ ಗಾಣಿಗರ ಸಭಾಭವನದಲ್ಲಿ ಶನಿವಾರ ನಡೆಯಿತು.
ಪ್ರಗತಿ ಬಂದು ಒಕ್ಕೂಟದ ವಲಯ್ಯಾಧ್ಯಕ್ಷ ನಾರಾಯಣ ಕೆಳಗಿನಮನೆ ಕಾರ್ಯಾಗಾರ ಉದ್ಘಾಟಿಸಿ ಶುಭ ಹಾರೈಸಿದರು.
ಭಜನಾ ಪರಿಷತ್ ತಾಲೂಕು ವೇದಿಕೆ ಅಧ್ಯಕ್ಷ ಲೋಕೇಶ್ ಬೆತ್ತೋಡಿ ಮತ್ತು 10 ಒಕ್ಕೂಟದ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳೆದು ಬಂದ ರೀತಿ, ಸಂಘ ರಚನೆ, ವಾರದ ಸಭೆ ಮಾಡುವ ವಿಧಾನ, ಒಕ್ಕೂಟ ರಚನೆ, ಒಕ್ಕೂಟ ಸಭೆ ಮಾಡುವ ವಿಧಾನ ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ, ಸಾಲ ವಿತರಣೆ, ಸಾಲ ವಿತರಣೆ ಉದ್ದೇಶ, ವಿಧಿಸುವ ಬಡ್ಡಿ ಸಾಲ ವಿತರಣೆ ಜವಾಬ್ದಾರಿ, ತಂಡ ಮತ್ತು ಬ್ಯಾಂಕಿಗೆ ಇರುವಂತಹ ವಿಚಾರದ ಬಗ್ಗೆ ವಿಶ್ಲೇಷಣೆ ಮಾಡಿ. ಯೋಜನೆಯಿಂದ ದೊರೆಯುವ ಸೌಲಭ್ಯ ಈ ಮುಂತಾದ ಮಾಹಿತಿ ನೀಡಿದರು.
ತಾಲೂಕು ಯೋಜನಾಧಿಕಾರಿ ಶಶಿಧರ್ ತಂಡದ ನಿರ್ವಹಣೆ, ಮಾಸಿಕ ವರದಿ ಕುರಿತು ಮಾಹಿತಿ ನೀಡಿ, ಯೋಜನೆ ಮೂಲಕ ನೀಡಿದ ಸೌಲಭ್ಯದ ಅಂಕಿ ಅಂಶವನ್ನು ಸಭೆಗೆ ತಿಳಿಸಿದರು.
ಜಿಲ್ಲಾ ನೋಡಲ್ ಅಧಿಕಾರಿ ರಾಮ್, ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ವಿವಿಧ ವಿಮೆಯ ಕುರಿತು ಮಾಹಿತಿ ನೀಡಿದರು.
ಸಮಾರೋಪ ಸಮಾರಂಭದಲ್ಲಿ ವಳಾ ಲು ಒಕ್ಕೂಟದ ಅಧ್ಯಕ್ಷ ಮಹೇಂದ್ರವರ್ಮ ಮಾತನಾಡಿ, ನಾವು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳು. ನಾವು ಯಾವತ್ತು ಇಂತಹ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬೇಕು. ನಮಗೆ ನೆಮ್ಮದಿಯ ಬದುಕನ್ನು ಕಟ್ಟಿ ಕೊಟ್ಟ ಯೋಜನೆಯನ್ನು ನಾವು ಕೈ ಬಿಡಬಾರದು ಎಂದರು.
ವಳಾಲು ಕಾರ್ಯಕ್ಷೇತ್ರದ ಶ್ರೀ ಮಂಜುನಾಥ ಸಂಘದ ಸದಸ್ಯೆ ಸುಜಾತಾ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉಪ್ಪಿನಂಗಡಿ ವಲಯಕ್ಕೆ ಯೋಜನೆಯ ಮೂಲಕ ಪ್ರಸ್ತುತ ಮಂಜುರಾದ ವಿವಿಧ ಅನುದಾನದ ಮಂಜುರಾತಿ ಪತ್ರವನ್ನು ಫಲಾನುಭವಿಗಳಿಗೆ ವಿತರಿಸಲಾಯಿತು
ಪವಿತ್ರ, ರಕ್ಷಿತ, ದೀಕ್ಷಾ ಪ್ರಾರ್ಥನೆ ಹಾಡಿದರು. ಕಜೆಕ್ಕಾರು ಸೇವಾ ಪ್ರತಿನಿಧಿ ಉಷಾ ಸ್ವಾಗತಿಸಿ, ಪೆರಿಯಡ್ಕ ಸೇವಾ ಪ್ರತಿನಿಧಿ ಮಮತಾ ವಂದಿಸಿದರು. ಮೇಲ್ವಿಚಾರಕ ಶಿವಪ್ಪ ಎಮ್. ಕೆ. ಕಾರ್ಯಕ್ರಮ ನಿರೂಪಿಸಿದರು.