ಪುತ್ತೂರು : ಮೂಕಾಂಬಿಕ ಕಲ್ಚರಲ್ ಅಕಾಡೆಮಿ ಅರ್ಪಿಸುವ ಯುಗಳ ನೃತ್ಯ- ಕಲಾದೀಪ ವಿದ್ವಾನ್ ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ದಂಪತಿಯಿಂದ ‘ನೃತ್ಯೋತ್ಕ್ರಮಣ-2024’ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶನಗೊಂಡಿತು.

ಭರತನಾಟ್ಯದ ಅಂಗವಾಗಿ ಸುಮಾರು ಎರಡೂವರೆ ಗಂಟೆಗಳ ಕಾಲ ಪುತ್ತೂರು ಶ್ರೀ ಮಹಾಲಿಂಗೇಶ್ವರನ ಕುರಿತ ಪದವರ್ಣದ ಭರತನಾಟ್ಯ ಪ್ರದರ್ಶನಗೊಂಡಿತು.


ಹಿಮ್ಮೇಳದಲ್ಲಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಮಂಗಳೂರು (ನಟುವಾಂಗ), ವಿದ್ವಾನ್ ಗೋಪಾಲಕೃಷ್ಣನ್ ಚೆನ್ನೈ (ಹಾಡುಗಾರಿಕೆ), ವಿದ್ವಾನ್ ವಿನಯ್ ನಾಗರಾಜನ್ ಬೆಂಗಳೂರು (ಮೃದಂಗ), ವಿದ್ವಾನ್ ವಿವೇಕ್ ಕೃಷ್ಣ ಬೆಂಗಳೂರು (ಕೊಳಲು), ಮಂಗಳೂರು ದೇವ್‍ಪ್ರೋ ಸೌಂಡ್ಸ್ (ಧ್ವನಿ-ಬೆಳಕು) ಹಾಗೂ ಪುತ್ತೂರು ಭಾವನಾ ಕಲಾ ಆರ್ಟ್ಸ್ (ರಂಗಾಲಂಕಾರ) ಸಹಕರಿಸಿದರು.
