ಲವ್‌ ಮಾಡ್ಬೇಕಾ, ಗಡ್ಡ ಬೋಳಿಸಿ : ಹುಡುಗಿಯರ ವಿಚಿತ್ರ ಬೇಡಿಕೆ

ಕ್ಲೀನ್‌ ಶೇವ್‌ ಮಾಡಿದ ಹುಡುಗರು ಬೇಕೆಂದು ಆಗ್ರಹಿಸಿ ರ‍್ಯಾಲಿ

ಇಂದೋರ್‌ : ಈಗಿನ ಯುವಕರಿಗೆ ಗಡ್ಡ ಬಿಡುವುದು ಬಹಳ ಇಷ್ಟ. ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಕಾರ್ಪೋರೇಟ್‌ ಕಂಪನಿಯ ತನಕ ಎಲ್ಲಿ ನೋಡಿದರೂ ಗಡ್ಡಧಾರಿ ಸ್ಟೈಲಿಶ್‌ ಹುಡುಗರೇ ಹೆಚ್ಚಾಗಿ ಕಾಣಸಿಗುತ್ತಾರೆ. ಗಡ್ಡಕ್ಕೆ ಹುಡುಗಿಯರು ಬೇಗ ಬೌಲ್ಡ್‌ ಆಗುತ್ತಾರೆ ಎಂದು ಅವರು ಭಾವಿಸಿರಬಹುದು. ಆದರೆ ಎಲ್ಲ ಹುಡುಗಿಯರಿಗೆ ಗಡ್ಡ ಇಷ್ಟ ಆಗುವುದಿಲ್ಲ. ಇಂದೋರ್‌ನ ಕೆಲವು ಹುಡುಗಿಯರು ನಮಗೆ ಕ್ಲೀನ್‌ ಶೇವ್‌ ಹುಡುಗರೇ ಬೇಕೆಂದು ಆಗ್ರಹಿಸಿ ಬೀದಿಗಿಳಿರುವುದೇ ಇದಕ್ಕೆ ಸಾಕ್ಷಿ. ಇದರ ವೀಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿ ಲಕ್ಷಾಂತರ ವೈೂಸ್‌ ಆಗಿದೆ. ಹೀಗಾಗಿ ಗಡ್ಡ ಬಿಟ್ಟ ಗಂಡುಗಳು ಈಗ ತಮ್ಮ ಗಡ್ಡದ ಬಗ್ಗೆ ಯೋಚಿಸುವುದು ಒಳ್ಳೆಯದು.

ವೀಡಿಯೊದಲ್ಲಿ ಹುಡುಗಿಯರು ನಮಗೆ ಪ್ರೀತಿಸಲು ಕ್ಲೀನ್ ಶೇವ್ ಮಾಡಿದ ಹುಡುಗರು ಬೇಕೆಂದು ಸ್ಲೋಗನ್ ಬರೆದ ಫಲಕಗಳನ್ನು ಹಿಡಿದು ಘೋಷಣೆ ಕೂಗುತ್ತಾ ಹೋಗುತ್ತಿರುವುದು ಕಾಣಿಸುತ್ತಿದೆ. ಈ ವೀಡಿಯೊ ನೋಡಿದರೆ ಗಡ್ಡಪ್ರೇಮಿ ಗಂಡುಮಕ್ಕಳು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳೋದು ಖಂಡಿತ. ಇಂದೋರ್‌ನ ಹುಡುಗಿಯರು ಕ್ಲೀನ್ ಶೇವ್ ಮಾಡಿದ ಹುಡುಗರಿಗಾಗಿ ಡಿಮಾಂಡ್ ಮಾಡುತ್ತಿದ್ದಾರೆ. ಗಡ್ಡ ತೆಗೆಯಿರಿ, ಪ್ರೀತಿ ಉಳಿಸಿಕೊಳ್ಳಿ ಎಂಬ ‌ಸ್ಲೋಗನ್ ಹಿಡಿದು ಬೀದಿಗಳಲ್ಲಿ ರ‍್ಯಾಲಿ ಮಾಡುತ್ತಿದ್ದಾರೆ. ಈ ರ‍್ಯಾಲಿಯಲ್ಲಿ ಹುಡುಗಿಯರು ‘ಗಡ್ಡ ಬೇಕಾ, ಹುಡುಗಿ ಬೇಕಾ ಆಯ್ಕೆ ನಿಮ್ಮದು‘ ಎಂದೆಲ್ಲಾ ಬರೆದಿರುವ ಫಲಕ ಹಿಡಿದುಕೊಂಡಿರುವುದು ಕಾಣಿಸುತ್ತಿದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top