ಪುತ್ತೂರು: ನ.2 ರಂದು ಶಾಸಕ ಅಶೋಕ್ ರೈ ನೇತೃತ್ವದ ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೀಪಾವಳಿ ಪ್ರಯುಕ್ತ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿನಡೆಯಲಿರುವ ಅಶೋಕ ಜನಮನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಆಹ್ವಾನ ನೀಡಲಾಯಿತು.

ಶುಕ್ರವಾರ ಬೆಂಗಳೂರಿನಲ್ಲಿ ಇಬ್ಬರನ್ನು ಭೇಟಿಯಾದ ಶಾಸಕರು ಪುತ್ತೂರಿನ ಐತಿಹಾಸಿಕ ಈ ಕಾರ್ಯಕ್ರಮಕ್ಕೆ ಬಂದು ಹಾರೈಸುವಂತೆ ಮನವಿ ಮಾಡಿದರು. ಕಾರ್ಯಕ್ರಮಕ್ಕೆ ಬರುವುದಾಗಿ ಇಬ್ಬರೂ ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
ವರ್ಷಂಪ್ರತಿ ದೀಪಾವಳಿ ಪ್ರಯುಕ್ತ ನಡೆಯುವ ವಸ್ತ್ರದಾನ ಹಾಗೂ ಸಹಭೋಜನ ಕಾರ್ಯಕ್ರಮದಲ್ಲಿ ಈ ಬಾರಿ 75000 ಮಿಕ್ಕಿ ಮಂದಿಗೆ ವಸ್ತ್ರದಾನ ನಡೆಯಲಿದೆ. ಬಹಳ ಅದ್ದೂರಿಯಾಗಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಪ್ರಮುಖ ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ.
ಪುತ್ತೂರು ಶಾಸಕ ಅಶೋಕ್ ರೈ ಯವರು ಕಂಬಳ, ಸೀರೆ ಹಂಚುವುದು ಇತ್ಯಾದಿ ಪ್ರಚಾರ ಗಿಟ್ಟಿಸುವ ಕಾರ್ಯ ಮಾಡುತ್ತಿದ್ದಾರೆ ವಿನಹ ಜನರಿಗೆ ಬೇಕಾದ ಕೆಲಸ ಆಗುತ್ತಿಲ್ಲ, ಪುತ್ತೂರು ನಗರದಲ್ಲಿ ಸ್ಪಿಲ್ಟ್ ಕನ್ವರ್ಟ್ ಆದ ಸೈಟ್ ಗಳ ಖಾತೆ ಮಾಡಿಸಿ ಕೊಡುವ ಬಗ್ಗೆ ಗಮನವೇ ಹರಿಸುತ್ತಿಲ್ಲ, ಸಾವಿರಾರು ಸೈಟ್ ಗಳು ಮನೆ ಕಟ್ಟಲು ಕಾಯುತ್ತಿವೆ. ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ.