1200 ಇಸ್ರೇಲ್ ನಾಗರಿಕರನ್ನು ಕೊಂದಿದ್ದ ಸಿನ್ವರ್
ಟೆಲ್ ಅವಿವ್: ಕಳೆದ ವರ್ಷ ಅಕ್ಟೋಬರ್ 7ರಂದು ತನ್ನ ಮೇಲೆ ನಡೆಸಿ 1200 ಮಂದಿಯ ಸಾವಿಗೆ ಕಾರಣವಾದ ದಾಳಿಯ ಮಾಸ್ಟರ್ ಮೈಂಡ್ ಹಮಾಸ್ ಉಗ್ರ ಸಂಘಟನೆಯ ನಾಯಕ ಯಾಹ್ಯಾ ಸಿನ್ವರ್‌ನನ್ನು ಮುಗಿಸುವ ಮೂಲಕ ಇಸ್ರೇಲ್ ಪ್ರೀಕಾರ ತೀರಿಸಿಕೊಂಡಿದೆ. ಸಿನ್ವರ್ ಸತ್ತಿರುವುದು ದೃಢವಾಗುತ್ತಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇರಾನ್‌ಗೆ ಈ ಕುರಿತು ಸಂದೇಶ ರವಾನಿಸಿತನ್ನ ಜೊತೆ ಕಾಲುಕೆರೆದು ಜಗಳಕ್ಕೆ ಬರುವ್ರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.
ಇರಾನ್ ಪೋಷಿಸಿಕೊಂಡು ಬಂದಿದ್ದ ಉಗ್ರವಾದದ ರೆಕ್ಕೆಗಳನ್ನು ಕತ್ತರಿಸಿ ಹಾಕಿದ್ದೇವೆ, ನಿಮ್ಮ ಉಗ್ರ ಚಟುವಟಿಕೆಗಳು ಕೊನೆಗೊಳ್ಳುವ ಕಾಲ ಬಂದಿದೆ ಎಂದು ಇರಾನ್‌ಗೆ ರವಾನಿಸಿದ ಸಂದೇಶದಲ್ಲಿ ನೆತನ್ಯಾಹು ಹೇಳಿದ್ದಾರೆ.
ಇರಾನ್ ಕಟ್ಟಿಬೆಳೆಸಿದ ಉಗ್ರಲೋಕದ ಬುಡವೇ ಕಳಚಿ ಬೀಳುತ್ತಿದೆ. ಹಿಜ್ಬುಲ್ಲ ಮುಖಂಡ ನಸ್ರುಲ್ಲ, ಅವನ ನಂತರದ ಮೊಹ್ಸೆನ್ ಕತೆ ಮುಗಿದಿದೆ. ಇಸ್ಮಾಯಿಲ್ ಹನಿಯೆ, ಮೊಹಮ್ಮದ್ ಡೆಫ್ ಸತ್ತಿದ್ದಾರೆ. ಇರಾನ್ ತನ್ನ ನೆಲದಲ್ಲಿ ಮಾತ್ರವಲ್ಲದೆ ಲೆಬನಾನ್, ಇರಾಕ್, ಸಿರಿಯಾದಲ್ಲಿ ಭಯೋತ್ಪಾದನೆಯನ್ನು ಪೋಷಿಸುತ್ತಿದ್ದು, ಇದನ್ನು ನಾವು ಕೊನೆಗೊಳಿಸುತ್ತೇವೆ ಎಂದು ನೆತನ್ಯಾಹು ಹೇಳಿದ್ದಾರೆ.
ಗುರುವಾರ ಗಾಜಾದಲ್ಲಿ ಇಸ್ರೇಲಿ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ಟೋಬರ್ 7ರ ಹತ್ಯಾಕಾಂಡ ಮತ್ತು ದುಷ್ಕೃತ್ಯಗಳಿಗೆ ಕಾರಣವಾದ ಸಾಮೂಹಿಕ ಕೊಲೆಗಾರ ಯಾಹ್ಯಾ ಸಿನ್ವರ್‌ನನ್ನು ಹತ್ಯೆ ಮಾಡಲಾಗಿದೆ. ಇದು ನಮ್ಮ ಮಿಲಿಟರಿಗೆ ಸಿಕ್ಕಿದ ಜಯ ಎಂದು ಇಸ್ರೇಲ್ ವಿದೇಶಾಂಗ ಸಚಿವ ಕಾಟ್ಜ್ ಬಣ್ಣಿಸಿದ್ದಾರೆ.
ಇಸ್ರೇಲಿ ಮಿಲಿಟರಿ ಮತ್ತು ಗುಪ್ತಚರ ಸಂಸ್ಥೆಗಳು ಮೃತಪಟ್ಟ ವ್ಯಕ್ತಿಯ ದೇಹವು ಸಿನ್ವಾರ್‌ನದೇ ಎಂದು ಡಿಎನ್‌ಎ ಪರಿಶೀಲನೆ ನಡೆಸಿದ ಬಳಿಕ ಆತ ಮೃತಪಟ್ಟಿರುವುದನ್ನು ಅಧಿಕೃತವಾಗಿ ಘೋಷಿಸಿವೆ. ಗಾಜಾದ ಕಟ್ಟಡದ ನೆಲಮಹಡಿಯಲ್ಲಿ ಇದ್ದ ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ದಾಳಿ ನಡೆಸಿತ್ತು.
ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿ ಬಳಿಕ ಯಾಹ್ಯಾ ಸಿನ್ವಾರ್ ಇಸ್ರೇಲ್‌ನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ. ಆಗಸ್ಟ್‌ನಲ್ಲಿ ಇರಾನ್‌ನಲ್ಲಿ ನಡೆದ ಸ್ಫೋಟದಲ್ಲಿ ಇಸ್ಮಾಯಿಲ್ ಹನಿಯೆ ಹತನಾದ ನಂತರ ಹಮಾಸ್ ಮುಖ್ಯಸ್ಥನಾಗಿದ್ದ. 1962ರಲ್ಲಿ ಜನಿಸಿದ ಸಿನ್ವರ್ 1987ರಲ್ಲಿ ಹಮಾಸ್ ಸ್ಥಾಪಿಸಿದಾಗ ಅದರ ಆರಂಭಿಕ ಸದಸ್ಯರಲ್ಲಿ ಒಬ್ಬನಾಗಿದ್ದ.