ಹಿಂದೂ ತಾಯಂದಿರ ಕುರಿತು ಅಸಹ್ಯವಾಗಿ ಮಾತನಾಡುವ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ವಿರುದ್ಧ ಸುಮೊಟೋ ಕೇಸು ದಾಖಲಿಸಿ | ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರರಿಂದ ಆಗ್ರಹ

ಉಪವಲಯ ಅರಣ್ಯ ಅಧಿಕಾರಿ ಸಂಜೀವ ಪೂಜಾರಿ ಕಾಣೆಯೂರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಲಕ್ಷ ಪೂಜಾರಿ ಹುಡುಗಿಯರು ಸೂಳೆಯರಾಗಿದ್ದಾರೆ ಎಂದು ಭಜನೆಗೆ ಹೋಗುವ ಹೆಣ್ಣು ಮಕ್ಕಳ ಕುರಿತು ಅಸಹ್ಯವಾಗಿ ಮಾತನಾಡಿರುವುದು ಖಂಡನೀಯ. ಇದು ಸಂಜೀವ ಪೂಜಾರಿಗೆ ಕೊನೆಯ ಎಚ್ಚರಿಕೆ. ತಕ್ಷಣ ಸಂಜೀವ ಪೂಜಾರಿ ವಿರುದ್ಧ ಪೊಲೀಸರು ಸುಮೊಟೋ ಕೇಸು ದಾಖಲಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ ಆಗ್ರಹಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಲಕ್ಷ ಪೂಜಾರಿ ಹುಡುಗಿಯರು ಸೂಳೆಯರಾಗಿದ್ದಾರೆ ಎಂಬುದಕ್ಕೆ ನನ್ನ ಬಳಿ ದಾಖಲೆ ಇದೆ ಎಂಬ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ಭಜನೆಗೆ ಹೋಗುತ್ತಿರುವಂತಹ ಹೆಣ್ಣು ಮಕ್ಕಳ ಬಗ್ಗೆ ಅಸಹ್ಯವಾಗಿ ಮಾತನಾಡಿರುತ್ತಾರೆ. ತನ್ನ ಮನೆಯ ಹೆಣ್ಣು ಮಕ್ಕಳನ್ನು ಅಸಹ್ಯ ರೀತಿಯಲ್ಲಿ ನೋಡುವ ಮನಸ್ಥಿತಿ ಇರುವಂತಹ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯಿಂದ ಮಾತ್ರ ಇಂತಹ ಮಾತುಗಳು ಬರುವಂತಹದ್ದು. ಒಬ್ಬ ಸರಕಾರಿ ಉನ್ನತ ಮಟ್ಟದ ಹುದ್ದೆಗಳಲ್ಲಿ ಇರುವಂತಹ ವ್ಯಕ್ತಿಯ ನಾಲಗೆಯಲ್ಲಿ ಇಂತಹ ಮಾತುಗಳು ಸಂಸ್ಕಾರ ಹೀನ ಮಾತುಗಳು ಬರುವುದು ಶೋಭೆಯಲ್ಲ

ಶೀಘ್ರದಲ್ಲಿ ಸಂತ್ರಸ್ತೆಯ ನ್ಯಾಯಕ್ಕಾಗಿ ನಮ್ಮ ನಡಿಗೆ ನಾರಿ ಶಕ್ತಿಯ ಅನಾವರಣ” ಹಿಂದೂ ಸಂಸ್ಕೃತಿಯಲ್ಲಿ ಸ್ತ್ರೀ ಯನ್ನು ಮಾತೆಯ ರೂಪದಲ್ಲಿ ನೋಡಿರುವುದು ಹೊರತು ಇವರಂತಹ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ವ್ಯಕ್ತಿಯ ಬಳಿ ಹೇಳಿಸಿಕೊಳ್ಳುವ ಪರಿಸ್ಥಿತಿ ನಮ್ಮ ಹಿಂದೂ ಸಮಾಜಕ್ಕೆ ಬಂದಿಲ್ಲ ಬಿಲ್ಲವ ಸಮಾಜದ ಮಾತೃಶಕ್ತಿ ಮತ್ತು ಭಜನಾ ಮಂಡಳಿಯ ಮಾತೃಶಕ್ತಿಗೆ ಮಾಡಿದ ಅವಮಾನಕ್ಕೆ ಹಾಗೂ ಹೆಣ್ಣು ಮಕ್ಕಳ ಚಾರಿತ್ರ್ಯವನ್ನು ವದೆ ಮಾಡಿರುವುದು ತೀವ್ರ ಖಂಡನೀಯ ಈತನ ವಿರುದ್ಧ ಪೊಲೀಸ ಇಲಾಖೆ ಸುಮೋಟೋ ಕೇಸ್ ಅನ್ನು ದಾಖಲಿಸಿ ಕೂಡಲೇ ಬಂಧಿಸಬೇಕು ಹಾಗೂ ಸರಕಾರ ಸಂಜೀವ ಪೂಜಾರಿ ಕಾಣಿಯೂರು ಅವರನ್ನು ಸರಕಾರ ಕೆಲಸದಿಂದ ವಜಾ ಮಾಡಿ ಬಿಲ್ಲವ ಸಮಾಜದ ಹೆಣ್ಣು ಮಕ್ಕಳಿಗೆ ನ್ಯಾಯವನ್ನು ಒದಗಿಸಬೇಕೆಂದು ಆಗ್ರಹಿಸಿದ್ದಾರೆ.



































 
 

ಇಲಾಖೆ ಈತನ ಮೇಲೆ ಕಾನೂನು ಕ್ರಮವನ್ನು ತೆಗೆದುಕೊಳ್ಳದೆ ಆತನನ್ನು ಬಂಧಿಸದೆ ಬಿಟ್ಟರೆ ಹಿಂದೂ ಸಮಾಜದ ಹೆಣ್ಣು ಮಕ್ಕಳು ನೇರ ಆತನಿಗೆ ಪೂರಕ್ಕೆ ಸೇವೆ ಮಾಡಬೇಕಾಗಬಹುದು ಎಂಬ ಎಚ್ಚರಿಕೆ ನೀಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top