ಯಕ್ಷ ಭಾರತಿ ಸಂಸ್ಥೆಯ ಸೇವಾ ಕಾರ್ಯ ಅಭಿನಂದನೀಯ: ಮೋಹನ್ ಕುಮಾರ್. ಕೆ. | ಉಚಿತ ಆರೋಗ್ಯ, ಕ್ಯಾನ್ಸರ್ ತಪಾಸಣಾ ಶಿಬಿರ 

ಬೆಳ್ತಂಗಡಿ: ಕನ್ಯಾಡಿ ಯಕ್ಷ ಭಾರತಿಯ ದಶಮಾನೋತ್ಸವ ಪ್ರಯುಕ್ತ ಬೆಳ್ತಂಗಡಿ ತುಳು ಶಿವಳ್ಳಿ ಸಭಾ ಆಶ್ರಯದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ, ಯೆನಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಜುಲೈಕಾ ಕ್ಯಾನ್ಸರ್ ಆಸ್ಪತ್ರೆ ದೇರಳಕಟ್ಟೆ ಸಹಕಾರದಲ್ಲಿ ಉಚಿತ ಆರೋಗ್ಯ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರ ಕನ್ಯಾಡಿಯ ಹರಿಹರಾನುಗ್ರಹ ಕಲ್ಯಾಣ ಮಂಟಪದಲ್ಲಿ ಜರಗಿತು.

 ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮತ್ತು ಲಕ್ಷ್ಮಿ ಗ್ರೂಪ್ಸ್  ಮಾಲಕ ಮೋಹನ್ ಕುಮಾರ್ ಕೆ. ಶಿಬಿರ ಉದ್ಘಾಟಿಸಿ ಮಾತನಾಡಿ, ಯಕ್ಷಗಾನ, ಸಂಸ್ಕಾರ ಶಿಕ್ಷಣ ಜೊತೆಗೆ ಆರೋಗ್ಯ ಸೇವೆಯ ಸಾಮಾಜಿಕ ಕಾಳಜಿಯನ್ನು ಯಕ್ಷ ಭಾರತಿ ಸಂಸ್ಥೆಯು ಹೊಂದಿರುವುದು ಮಾದರಿಯಾಗಿದೆ. ಬದುಕಿನ  ಅವಶ್ಯಕತೆಗಳಲ್ಲಿ ಕಲಾಸ್ವಾದನೆ, ಅರೋಗ್ಯ, ಸಂಸ್ಕಾರವು ಪ್ರಮುಖವಾಗಿದ್ದು ಈ ನಿಟ್ಟಿನಲ್ಲಿ ಯಕ್ಷ ಭಾರತಿ ಅಭಿನಂದನೀಯ ಕಾರ್ಯ ಎಂದು ತಿಳಿಸಿದರು.

ದೇರಳಕಟ್ಟೆ ಯೆನಪೋಯ ಮೆಡಿಕಲ್ ಕಾಲೇಜ್ ನ ಡಾ.ಅಶ್ವಿನಿ ಶೆಟ್ಟಿ,, ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆಯ ಡಾ. ಮುರಳಿ ಕೃಷ್ಣ ಇರ್ವತ್ರಾಯ, ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾ, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ ಶೆಟ್ಟಿ, ಉಜಿರೆ  ಶ್ರೀ ಧ. ಮ. ಕಾಲೇಜು ರಾ. ಸೆ. ಯೋ. ಯೋಜನಾಧಿಕಾರಿ ಡಾ. ಮಹೇಶ್ ಶೆಟ್ಟಿ, ಧರ್ಮಸ್ಥಳ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರೀತಮ್ ಡಿ, ಮುಂಡಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಗೌಡ, ಉಜಿರೆ ಜನಾರ್ದನ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ಗಂಗಾಧರ್ ರಾವ್ ಶುಭಹಾರೈಸಿದರು.



































 
 

ಸಮಾರಂಭದ ಅಧ್ಯಕ್ಷತೆಯನ್ನು ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ವಹಿಸಿದ್ದರು.  ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಪ್ರಸ್ಥಾವನೆಗೈದರು. ಶ್ರೀನಿವಾಸರಾವ್ ಕಲ್ಮಂಜ ಪ್ರಾರ್ಥಿಸಿದರು

ದಶಮಾನೋತ್ಸವ ಸಮಿತಿಯ ಕಾರ್ಯದರ್ಶಿ ರೋ.ವಿದ್ಯಾ ಕುಮಾರ್ ಕಾಂಚೋಡು ಸ್ವಾಗತಿಸಿ, ಸಹ ಕಾರ್ಯದರ್ಶಿ ಗೀತಾ ಕುರ್ಮಾಣಿ ವಂದಿಸಿದರು. ಮುರಳಿ ಕೃಷ್ಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಯೆನಪೋಯ ಆಸ್ಪತ್ರೆಯ ನವಾಜ್ ಮತ್ತು ಶಮೀರ್ ಶಿಬಿರದ ಸಂಯೋಜಕರಾಗಿದ್ದರು.

ಕೃಷಿ ಪತ್ತಿನ ಸಹಕಾರಿ ಸಂಘ ಮುಂಡಾಜೆ, ಬಂಟರೆ ಯಾನೆ ನಾಡವರ ಸಂಘ ಉಜಿರೆ, ಹಿಂದೂ ಧಾರ್ಮಿಕ ಸೇವಾ ಸಮಿತಿ ಕನ್ಯಾಡಿ, ಬ್ರಹ್ಮಶ್ರೀ ಗುರು ನಾರಾಯಣ ಸೇವಾ ಸಮಿತಿ ಧರ್ಮಸ್ಥಳ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ವಿಶ್ವಹಿಂದೂ  ಪರಿಷತ್ ಮತ್ತು ಭಜರಂಗದಳ ಕಲ್ಮಂಜ, ಒಕ್ಕಲಿಗರ ಸೇವಾ ಸಂಘ ನಾರ್ಯ ಸಹಕಾರ ನೀಡಿದ್ದರು. 11 ಆರೋಗ್ಯ ಸೇವಾ ವಿಭಾಗಗಳಲ್ಲಿ ತಜ್ಞ ವೈದ್ಯರು 150ಕ್ಕಿಂತಲೂ ಹೆಚ್ಚು ಫಲಾನುಭವಿಗಳನ್ನು ತಪಾಸಣೆ ಮಾಡಿ ಚಿಕಿತ್ಸೆಯ ಮಾಹಿತಿ ನೀಡಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top