ಸುಳ್ಯ : ದ್ವಿಚಕ್ರ ವಾಹನ ಅಪಘಾತದ ಸಂಭವಿಸಿದ ಪರಿಣಾಮ ಒಬ್ಬರು ಮೃತಪಟ್ಟ ಘಟನೆ ಸುಳ್ಯದ ಪೈಚಾರು ಸೋಣಂಗೇರಿ ಎಂಬಲ್ಲಿಯ ಆರ್ತಾಜೆಯಲ್ಲಿ ನಡೆದಿದೆ.
ಐವರ್ನಾಡು ಗ್ರಾಮದ ಪಾಲೆಪ್ಪಾಡಿ ನಿವಾಸಿ, ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉದ್ಯೋಗಿ ಭೋಜಪ್ಪ (50) ಮೃತಪಟ್ಟವರು.
ಸುಳ್ಯ ಕಡೆಯಿಂದ ಸೋಣಂಗೇರಿ ಕಡೆಗೆ ಸಂಚರಿಸುತ್ತಿದ್ದ ಬುಲೆಟ್ ಹಾಗೂ ಐವರ್ನಾಡಿನಿಂದ ಸುಳ್ಯ ಕಡೆಗೆ ಸಾಗುತ್ತಿದ್ದ ಭೋಜಪ್ಪ ಅವರ ಹೋಂಡ ಬೈಕ್ ನಡುವೆ ಡಿಕ್ಕಿಯಾಗಿದೆ. ಬುಲೆಟ್‌ನಲ್ಲಿದ್ದ ನೆಲ್ಲೂರು ಕೆಮ್ರಾಜಿಯ ಮಂದ್ರಪ್ಪಾಡಿ ಅರುಣ್ ಹಾಗೂ ವಸಂತ ಅವರು ಗಾಯಗೊಂಡಿದ್ದು, ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಎರಡೂ ಬೈಕ್‌ಗಳು ಜಖಂಗೊಂಡಿದೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
























