ವಿವೇಕಾನಂದ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಚಟುವಟಿಕೆಗಳ ಉದ್ಘಾಟನೆ

ಪುತ್ತೂರು: ಪ್ರಸ್ತುತ ದಿನಗಳಲ್ಲಿ ಮನಃಶಾಸ್ತ್ರ ವಿಭಾಗ ಹೆಚ್ಚು ಬೇಡಿಕೆ ಇರುವಂಥದ್ದು. ಪಾಶ್ಚಿಮಾತ್ಯ ಸಂಪ್ರದಾಯಕ್ಕೆ ಹೋಲಿಸಿದರೆ ಭಾರತೀಯ ಮನಃಶಾಸ್ತ್ರದಲ್ಲಿ ಬಹಳ ವ್ಯತ್ಯಾಸವಿದೆ. ಮನುಷ್ಯ ಯೋಗ ಮತ್ತು ಧ್ಯಾನವನ್ನು ಅಭ್ಯಾಸಿಸುವ ಮೂಲಕ ದೈವತ್ವವನ್ನು ಸಾಧಿಸುತ್ತಾನೆ. ಮನಸ್ಸನ್ನು ಲಗಾಮಿಲ್ಲದ ಕುದುರೆ ಎಂದು ಕೃಷ್ಣ ಭಗವದ್ ಗೀತೆಯಲ್ಲಿ ಹೇಳಿದ್ದಾನೆ. ಮನಸ್ಸನ್ನು ನಿಯಂತ್ರಣಗೊಳಿಸಲು ಯೋಗ ಹಾಗೂ ಧ್ಯಾನಅತ್ಯಗತ್ಯ. ಮನುಷ್ಯನ ಮೆದುಳಿನ ಸ್ಥಿತಿಗತಿಯು ಆತ ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಉಪನ್ಯಾಸಕ ಡಾ.ಸುಧೀರ್ ಕೆ.ವಿ ಹೇಳಿದರು.

ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಮತ್ತು ಐ.ಕ್ಯೂ.ಎ.ಸಿ ಹಾಗೂ ವಿಜ್ಞಾನಘಟಕದ ಸಹಯೋಗದಲ್ಲಿ ಮನೋವಿಜ್ಞಾನ ವಿಭಾಗದ ವಾರ್ಷಿಕ ಚಟುವಟಿಕೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ, ನಮ್ಮದೇಹ ಬೆಳೆದಂತೆ,  ಬುದ್ಧಿ, ಮನಸ್ಸು ಹಾಗೂ ಚಿತ್ತ ಬೆಳವಣಿಗೆ ಹೊಂದುತ್ತ ಹೋಗುತ್ತದೆ. ವಿದ್ಯಾರ್ಥಿಗಳು ಮನಸ್ಸನ್ನು ತಿದ್ದಿಕೊಂಡು ಜೀವನೋತ್ಸಾಹವನ್ನು ಹೆಚ್ಚಿಸಿಕೊಂಡು ಬದುಕಬೇಕು. ನಮ್ಮ ಮನಸ್ಸು ನಮ್ಮ ಹತೋಟಿಯಲ್ಲಿರಬೇಕಾದರೆ ಅದನ್ನು ಸರಿಯಾಗಿ ನಿರ್ವಹಿಸುವ ಕ್ರಮವನ್ನು ನಾವು ತಿಳಿದುಕೊಂಡಿರಬೇಕು ಎಂದರು.































 
 

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣುಗಣಪತಿ ಭಟ್, ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್, ಮನೋವಿಜ್ಞಾನ ವಿಭಾಗದ ಉಪನ್ಯಾಸಕಿ ಅನುಷಾ, ಐಕ್ಯೂಎಸಿ ಘಟಕದ ಸಂಯೋಜಕ ಹಾಗೂ ವಿಜ್ಞಾನ ವಿಭಾಗದ ಮುಖ್ಯಸ್ಥ ಶಿವಪ್ರಸಾದ್ ಕೆ.ಎಸ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ವಾಣಿಶ್ರೀ ಸ್ವಾಗತಿಸಿ, ವಿದ್ಯಾರ್ಥಿನಿ ಬೆಟ್ಟಿಜಾನ್  ವಂದಿಸಿದರು. ತೇಜಸ್ವಿನಿ ಹಾಗೂ ಜೀವಿತಾ ಕಾರ್ಯಕ್ರಮ ನಿರ್ವಹಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top