ಮಧ್ಯರಾತ್ರಿಯೊಳಗೆ ದೇಶ ಬಿಟ್ಟು ಹೋಗಿ : ಕೆನಡ ರಾಯಭಾರಿಗಳಿಗೆ ಭಾರತ ಖಡಕ್‌ ಆದೇಶ

ಭಾರತದ ರಾಯಭಾರಿ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ತಿರುಗೇಟು

ಹೊಸದಿಲ್ಲಿ: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಪ್ರಕರಣದಲ್ಲಿ ಭಾರತೀಯ ರಾಯಭಾರಿಗಳ ವಿರುದ್ಧ ಪ್ರಕರಣ ದಾಖಲಿಸುವ ಕೆನಡ ಸರ್ಕಾರದ ನಡೆಯ ವಿರುದ್ಧ ದಿಟ್ಟ ನಿರ್ಧಾರ ಕೈಗೊಂಡಿರುವ ಭಾರತ 6 ಕೆನಡದ ರಾಜತಾಂತ್ರಿಕರನ್ನು ಹೊರಹಾಕಿದೆ. ಅಷ್ಟೇ ಅಲ್ಲ, ಅಕ್ಟೋಬರ್ 19ರ ಮಧ್ಯರಾತ್ರಿ 12 ಗಂಟೆಯೊಳಗೆ ಅಥವಾ ಅದಕ್ಕೂ ಮೊದಲು ಭಾರತವನ್ನು ತೊರೆಯುವಂತೆ ಕೇಂದ್ರ ಸರ್ಕಾರ ಖಡಕ್‌ ಸೂಚನೆ ನೀಡಿದೆ.
ಹಂಗಾಮಿ ಹೈ ಕಮಿಷನರ್ ಸ್ಟೀವರ್ಟ್ ರಾಸ್ ವೀಲರ್, ಡೆಪ್ಯುಟಿ ಹೈ ಕಮಿಷನರ್ ಪ್ಯಾಟ್ರಿಕ್ ಹೆಬರ್ಟ್, ಫಸ್ಟ್ ಸೆಕ್ರೆಟರಿ ಮೇರಿ ಕ್ಯಾಥರೀನ್ ಜೊಲ್ಲಿ, ಲ್ಯಾನ್ ರಾಸ್ ಡೇವಿಡ್ ಟ್ರಿಟ್ಸ್, ಆಡಮ್ ಜೇಮ್ಸ್ ಚುಪ್ಕಾ ಮತ್ತು ಪೌಲಾ ಓರ್ಜುಯೆಲಾ ಭಾರತವನ್ನು ತೊರೆಯುವಂತೆ ಖಡಕ್ ಸೂಚನೆ ನೀಡಲಾಗಿದೆ.
ರಾಜತಾಂತ್ರಿಕರನ್ನು ಹೊರಹಾಕುವ ಸ್ವಲ್ಪ ಸಮಯದ ಮೊದಲು, ವಿದೇಶಾಂಗ ಸಚಿವಾಲಯವು ಹಂಗಾಮಿ ಹೈ ಕಮಿಷನರ್ ಸ್ಟೀವರ್ಟ್ ರಾಸ್ ವೀಲರ್ ಅವರನ್ನು ಕರೆದು ಕೆನಡ ಸರ್ಕಾರದ ಇತ್ತೀಚಿನ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ ವೀಲರ್ ಭಾರತ ಸರ್ಕಾರಕ್ಕೆ ತಮ್ಮ ಪರವಾಗಿ ಸಾಕ್ಷ್ಯವನ್ನು ಪ್ರಸ್ತುತಪಡಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಕೆಲವೇ ಗಂಟೆಗಳ ನಂತರ, ಎಲ್ಲ ರಾಜತಾಂತ್ರಿಕರನ್ನು ಉಚ್ಚಾಟಿಸಲು ಆದೇಶ ನೀಡಲಾಗಿದೆ.
ಕೆನಡದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ತನಿಖೆಯಲ್ಲಿ ಕೆನಡಾದ ಸರ್ಕಾರವು ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಅವರನ್ನು ‘ಆಸಕ್ತಿಯ ವ್ಯಕ್ತಿ’ ಎಂದು ಹೆಸರಿಸಿತ್ತು. ವಾಸ್ತವವಾಗಿ, ಆಸಕ್ತಿಯ ವ್ಯಕ್ತಿ ಎಂದರೆ ಅಪರಾಧದಲ್ಲಿ ಭಾಗಿಯಾಗಿರಬಹುದು ಎಂದು ಪೊಲೀಸರು ನಂಬುವ ವ್ಯಕ್ತಿ, ಆದರೆ ಬಂಧಿಸಿರಲಿಲ್ಲ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top