ಪುತ್ತೂರು: ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನವರ ಗೋಲ್ಡನ್ ಗರ್ಲ್ಸ್ ಆಫ್ ಜಿ.ಎಲ್.ನ ಫೈನಲ್ ಕಾರ್ಯಕ್ರಮ ಜಿ.ಎಲ್. ವನ್ ಮಾಲ್ ನಲ್ಲಿ ನಡೆಯಿತು.
ಈ ಗೋಲ್ಡನ್ ಗರ್ಲ್ಸ್ ಆಯ್ಕೆಗಾಗಿ ಆಸಕ್ತ ಸ್ಥಳೀಯ ರೂಪದರ್ಶಿಗಳಿಂದ ಫೋಟೋಗಳನ್ನು ಆಹ್ವಾನಿಸಲಾಗಿತ್ತು. ಒಟ್ಟು ಒಂದು ಸಾವಿರದಷ್ಟು ಆಕಾಂಕ್ಷಿಗಳು ‘ಗೋಲ್ಡನ್ ಗರ್ಲ್ಸ್ ಆಫ್ ಜಿ.ಎಲ್.’ ಆಗುವ ಕನಸಿನೊಂದಿಗೆ ತಮ್ಮ ಆಕರ್ಷಕ ಫೋಟೋಗಳನ್ನು ಕಳುಹಿಸಿದ್ದರು. ಈ ಪೈಕಿ ವಿವಿಧ ಮಾನದಂಡಗಳಿಗೆ ಅನುಸಾರವಾಗಿ ಅಂತಿಮ 20 ರೂಪದರ್ಶಿಗಳನ್ನು ಆಯ್ಕೆ ಮಾಡಲಾಯಿತು.
ಹೀಗೆ ಆಯ್ಕೆಗೊಂಡ 20 ಜನ ರೂಪದರ್ಶಿಗಳಲ್ಲಿ ‘ಬೆಸ್ಟ್ ಆಫ್ ತ್ರೀ’ ಆಯ್ಕೆ ಮಾಡುವ ಸಲುವಾಗಿ ಫೈನಲ್ ರೌಂಡ್ ನಲ್ಲಿ ಜಿ.ಎಲ್.ವನ್ ಮಾಲ್ ನಲ್ಲಿ ನೆರೆದಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ‘‘ಲರ್ ಫುಲ್’ ಆಗಿ ನಡೆಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಅದಿತಿ ಎಂ.ಎಸ್. ಅವರು ‘ಐಗಿರಿ ನಂದಿನಿ..’ ನೃತ್ಯದ ಮೂಲಕ ಗಮನ ಸೆಳೆದರೆ, ಬಳಿಕ ನನ್ನ ಅವರ ಗಣಪತಿ ಸ್ತುತಿ ಸುಶ್ರಾವ್ಯವಾಗಿ ಮೂಡಿಬಂತು. ನಂತರ ಡಿ ರೋನ್ ಪುತ್ತೂರು ನೃತ್ಯ ತಂಡದಿಂದ ಆಕರ್ಷಕ ನೃತ್ಯ ಪ್ರದರ್ಶನಗೊಂಡಿತು.
ಇದಾದ ಬಳಿಕ ಒಂದು ಸಾವಿರ ಆಕಾಂಕ್ಷಿಗಳ ಪೈಕಿ ಅಂತಿಮ ಸುತ್ತಿಗೆ ಆಯ್ಕೆಗೊಂಡ 20 ಜನ ರೂಪದರ್ಶಿಗಳು ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನ ಸೂಪರ್ ಕಲೆಕ್ಷನ್ ಗಳಾದ ಪ್ರಾಚೀ, ಪಾರ್ಥ, ಗ್ಲೋ, ಆಂಟಿಕ್, ಟೆಂಪಲ್ ಆಭರಣಗಳನ್ನು ಧರಿಸಿ ವೇದಿಕೆ ಮೇಲೆ Ramp walk ನಡೆಸಿದರು.
ಅಂತಿಮವಾಗಿ 20 ಜನ ರೂಪದರ್ಶಿಗಳಲ್ಲಿ ರೋಶನಿ ಗೌಡ, ಅನುಷಾ ಮ್ಯಾಥ, ರಶ್ಮಿತಾ ರಾವ್ ಅವರು ಗೋಲ್ಡನ್ ಗರ್ಲ್ಸ್ ಆಫ್ ಜಿ.ಎಲ್. ಆಗಿ ಮೂಡಿಬರುವ ಮೂಲಕ ಈ ಸ್ಪರ್ಧಾ ಸರಣಿಯ ವಿಜೇತರಾಗಿ ಕಂಗೊಳಿಸಿದರು.
ಈ ಕಾರ್ಯಕ್ರಮದ ನಡುವೆ ನಿರೂಪಕರು ಕೇಳಿದ ಪ್ರಶ್ನೆಗಳಿಗೆ ಸ್ಥಳದಲ್ಲೇ ಸರಿ ಉತ್ತರ ನೀಡಿದ ಪ್ರೇಕ್ಷಕರಿಗೆ ಬಹುಮಾನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಜಿ.ಎಲ್ ಆಚಾರ್ಯ ಸಮೂಹ ಸಂಸ್ಥೆಗಳ ಮುಖ್ಯಸ್ಮರಾದ ಬಲರಾಮ ಆಚಾರ್ಯ, ರಾಜಿ ಬಲರಾಮ ಆಚಾರ್ಯ, ಲಕ್ಷ್ಮೀಕಾಂತ ಆಚಾರ್ಯ, ವೇದ ಲಕ್ಷ್ಮೀ ಕಾಂತ ಆಚಾರ್ಯ, ಸುಧನ್ಯ ಆಚಾರ್ಯ, ಮೇಘ ಶಂಕರ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಅಂತಿಮ ಸುತ್ತಿಗೆ ಆಯ್ಕೆಗೊಂಡ 20 ಜನ ರೂಪದರ್ಶಿಗಳು
ನಿವೇದಿತಾ ಜೈನ್, ಡಾ.ಕೃತಿಕಾ ಕೆ., ನಿವೇದಿತಾ ಜೈನ್, ಪ್ರತೀಕ್ಷಾ ಗೌಡ, ಮನೀಷಾ, ರೋಶನಿ ಶಿವಪ್ರಕಾಶ್ ಗೌಡ, ರಶ್ಮಿ ಎ.ಬಿ., ಅಂಬಿಕಾ ನಾಯಕ್ ಎನ್., ದಿಶಾ ಪೂಜಾರಿ, ಅನುಷಾ ಮ್ಯಾಥ್ಯೂ, ಶ್ರೇಯಾ ಸಾಲಿಯಾನ್, ಶಿವಾನಿ ಪ್ರಭು, ರಶ್ಮಿತಾ ರಾವ್, ಡಾ.ಅಭಿನಿತಾ ಎಂ.ಪಿ., ಸಾಯಿ ಶ್ರೀಪದ್ಮಾ, ಆಶ್ರೀತಾ ಡಿ.ಎಸ್., ಸುರಕ್ಷಾ, ನಿಶ್ಮಾ ಪೂಜಾರಿ, ಸ್ವಾತಿ ಗೌಡ.