ಇತಿಹಾಸ ಪ್ರಸಿದ್ಧ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ | ಕರ್ನಾಟಕ-ಕೇರಳದ ಕಲಾತಂಡಗಳ ಆಕರ್ಷಣೀಯ ಪ್ರದರ್ಶನ.

ಪುತ್ತೂರು: ನವರಾತ್ರಿ ಉತ್ಸವದ ಹಿನ್ನಲೆಯಲ್ಲಿ ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದ ವತಿಯಿಂದ ನಡೆಸಲಾಗುತ್ತಿರುವ 90 ನೇ ವರ್ಷದ ಶ್ರೀ ಶಾರದೋತ್ಸವದ ಅದ್ದೂರಿ ಶೋಭಾಯಾತ್ರೆಯು ಶನಿವಾರ ಸಂಜೆ ನಡೆಯಿತು. 

ಶೋಭಾಯಾತ್ರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕೇರಳದ ಕೇರಳದ ಪಂದಳಾಟಮ್, ಸಿಂಗಾರಿ ಕಾವಡಿ, ಕಥಕ್ಕಳಿ, ಮಹಿಳಾ ಸಿಂಗಾರಿ ಮೇಳಮ್, ತಿರಾಯಾಟ್ಟಮ್, ಸಿಂಗಾರಿ ಮೇಳ ಕಲಾತಂಡಗಳು ಭಾಗವಹಿಸಿತ್ತು.  ಇದರೊಂದಿಗೆ ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಕಡೆಗಳ ಕಲಾತಂಡ ಭಜನಾ ತಂಡಗಳು ಪಾಲ್ಗೊಂಡಿತ್ತು, , ಮಹಿಳೆಯರಿಂದ ವೇದಘೋಷ, ಚೆಂಡೆ ಮೇಳ, ವಾದ್ಯಘೋಷ, ವಾದ್ಯವೃಂದ, ಕುಣಿತ ಭಜನೆ, ಮಹಿಳಾ ವೀರಗಾಸೆ, ಡೊಳ್ಳು ಕುಣಿತ, ವೀರಭದ್ರ ಕುಣಿತ, ಕಹಳೆ, ಉತ್ತರ ಕರ್ನಾಟಕದ ಜುಗ್ಗಳಿಗೆ ಮೇಳ ಕಲಾ ತಂಡಗಳು ಭಾಗಿಯಾಗಿತ್ತು.  ವಿಶೇಷ ಆಕರ್ಷಣೆಯಾಗಿ ನಡೆದಾಡುವ ಬೃಹತ್ ಹನುಮಂತ ಹಾಗೂ ಬೃಹತ್ ಘಟೋದ್ಗಜ ಭಾಗಿಯಾಗುವ ಮೂಲಕ ಶೋಭಾಯಾತ್ರೆಯಲ್ಲಿ ಕಂಡು ಬಂದಿತ್ತು.

ಡಿಜೆ,ಪಟಾಕಿ, ಟ್ಲಾಬ್ಲೋಗಳಿಲ್ಲದೆ ಪಾರಂಪರಿಕತೆಗೆ ಒತ್ತು ನೀಡಿ, ಪರಿಸರ ಸ್ನೇಹಿಯಾಗಿ ಶೋಭಾಯಾತ್ರೆ ನಡೆಸಲಾಯಿತು.































 
 

ಬೊಳುವಾರಿನಿಂದ ಆರಂಭಗೊಂಡ ಶೋಭಾಯಾತ್ರೆಯು  ನಗರದ ಮುಖ್ಯ ರಸ್ತೆಯಲ್ಲಿ ದರ್ಭೆ ವೃತ್ತದ ತನಕ ಸಾಗಿತ್ತು. ಭಕ್ತರು ಮತ್ತು ಕಲಾಭಿಮಾನಿಗಳ ಅನುಕೂಲತೆಯ ನಿಟ್ಟಿನಲ್ಲಿ ರಸ್ತೆಯಲ್ಲಿ ೧೨ ಕಡೆಗಳಲ್ಲಿ ನಿಂತು ನೋಡುವ ವ್ಯವಸ್ಥೆ ಮಾಡಲಾಗಿತ್ತು. ಪುತ್ತೂರಿನ ಮುಖ್ಯರಸ್ತೆಯ ಉದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಶೋಭಾಯಾತ್ರೆಯ ಕೊನೆಯಲ್ಲಿ ಸುಚಿತ್ವಕ್ಕೆ ವಾಹನದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಶ್ರೀ ಶಾರದಾ ಭಜನಾ ಮಂದಿರ ಸಮಿತಿಯ ಗೌರವಾಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ, ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್, ಉಪಾಧ್ಯಕ್ಷ ಯಶವಂತ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಜೊತೆ ಕಾರ್ಯದರ್ಶಿ ಸುಧೀರ್ ಕಲ್ಲಾರೆ, ಉಪಾಧ್ಯಕ್ಷರಾದ ದಯಾನಂದ ಆದರ್ಶ, ಯಶವಂತ ಆಚಾರ್ಯ,ಡಾ. ಸುರೇಶ್ ಪುತ್ತೂರಾಯ, ಬಿಜೆಪಿ ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ಅಪ್ಪಯ್ಯ ಮಣಿಯನಿ, ರಾಜೇಶ್ ಬನ್ನೂರ್, ಚಂದ್ರಶೇಖರ ಬಪ್ಪಳಿಗೆ, ರಾಧಾಕೃಷ್ಣ ಬೋರ್ಕರ್,ಮುರಳಿಕೃಷ್ಣ ಹಸಂತಡ್ಕ,ಶೋಭಾಯಾತ್ರೆ ಸಂಚಾಲಕ ನವೀನ್ ಕುಲಾಲ್, ತಾರಾನಾಥ ಎಚ್,ರಾಧಾಕೃಷ್ಣ ನಂದಿಲ,ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯ ರಸ್ತೆಯಲ್ಲಿ ಸಾಗಿದ  ಶೋಭಾಯಾತ್ರೆಯಲ್ಲಿ ಪ್ರಮುಖ 12 ಪೂರ್ವನಿಗದಿತ ಸ್ಥಳಗಳಲ್ಲಿ  ಕಲಾತಂಡಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಇಲ್ಲೆಲ್ಲ ಜನ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಶೋಭಾಯಾತ್ರೆ ಕಣ್ತುಂಬಿಕೊಂಡರು. ಹಾದಿಯುದ್ದಕ್ಕೂ ಭಕ್ತರು  ಶ್ರೀ ಶಾರದಾ ಮಾತೆಗೆ ಹಣ್ಣುಕಾಯಿ ಮತ್ತು ಆರತಿ ಸಮರ್ಪಿಸಿದರು.

ರಾತ್ರಿ ದರ್ಬೆ ವೃತ್ತದ ಬಳಿಕ ಶೋಭಾಯಾತ್ರೆ ಸಂಪನ್ನಗೊಂಡ ಬಳಿಕ ಶ್ರೀ ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿರುವ ಕೆರೆಯಲ್ಲಿ ವಿಗ್ರಹ ಜಲಸ್ತಂಭನ ಮಾಡಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top