ಕಟೀಲು, ಕುದ್ರೋಳಿ ಕ್ಷೇತ್ರಗಳಿಗೆ ಭೇಟಿ ನೀಡಿದ ಸಂಜಯ್ ದತ್
ಮಂಗಳೂರು : ಕರಾವಳಿಯ ಹುಲಿ ನೃತ್ಯ ನೋಡಿ ಬಾಲಿವುಡ್ ನಟ ಸಂಜಯ್ ದತ್ ಫಿದಾ ಆಗಿದ್ದಾರೆ. ಶನಿವಾರ ಹುಲಿ ನೃತ್ಯ ಸ್ಪರ್ಧೆಗೆ ಭೇಟಿ ನೀಡಿದ ಸಂಜಯ್ ದತ್ ಕೆಲ ಹೊತ್ತು ಹುಲಿ ನೃತ್ಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಂಗಳೂರಿಗೆ ಬರುವ ಮೊದಲು ಸಂಜಯ್ ದತ್ ಕಟೀಲು ಕ್ಷೇತ್ರಕ್ಕೆ ಹೋಗಿ ದೇವಿಯ ದರ್ಶನ ಪಡೆದಿದ್ದರು. ಬಳಿಕ ಮಂಗಳೂರು ಕುದ್ರೋಳಿ ದೇವಳಕ್ಕೆ ಬಂದು ದೇವರ ಆಶೀರ್ವಾದ ಪಡೆದರು. ಎರಡೂ ದೇವಳಗಳಲ್ಲಿ ಅವರನ್ನು ಗೌರವಿಸಲಾಯಿತು. ಬಳಿಕ ಹುಲಿ ವೇಷ ಸ್ಪರ್ಧೆಗೆ ಹೋದ ಸಂಜಯ್ ದತ್ ಹುಲಿ ಕುಣಿತದ ಊದು ಪೂಜೆಯಲ್ಲಿ ಭಾಗವಹಿಸಿದರು. ಮುಂಬಯಿಯ ಉದ್ಯಮಿ ಮಹೇಶ್ ಶೆಟ್ಟಿ ಕುಡುಪುಲಾಜೆ ಕೋರಿಕೆ ಮೇರೆಗೆ ಸಂಜಯ್ ದತ್ ಕರಾವಳಿಯ ಹುಲಿ ನೃತ್ಯ ವೀಕ್ಷಿಸಲು ಬಂದಿದ್ದರು. ಮಹೇಶ್ ಶೆಟ್ಟಿಯವರೇ ಅವರನ್ನು ದೇವಸ್ಥಾನಗಳಿಗೆ ಮತ್ತು ಊದು ಪೂಜೆಗೆ ಕರೆದುಕೊಂಡು ಹೀಗಿ ವಿವರಿಸಿದರು.
ಕಟೀಲು ದೇವಸ್ಥಾನದ ವತಿಯಿಂದ ಸಂಜಯ್ ದತ್ ಅವರನ್ನು ದೇವರ ಶೇಷ ವಸ್ತ್ರ ಮತ್ತು ಪ್ರಸಾದ ನೀಡಿ ಗೌರವಿಸಲಾಯಿತು. ಈ ವೇಳೆ, ಸಂಜಯ್ ದತ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು. ಕುದ್ರೋಳಿಯಲ್ಲಿ ಪದ್ಮರಾಜ್ ಆರ್. ಪೂಜಾರಿ ಗೌರವಿಸಿದರು.