ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಕಲೆಗಳ ಅಧ್ಯಯನ ಕೇಂದ್ರ “ಯಕ್ಷ ಕಲಾಕೇಂದ್ರ” ಮತ್ತು ದೇಶಭಕ್ತ ಎನ್ಎಸ್ ಕಿಲ್ಲೆ ಪ್ರತಿಷ್ಠಾನದ ಸಹಯೋಗದಲ್ಲಿ ಮೋಕ್ಷ ಸಂಗ್ರಾಮ ಯಕ್ಷಗಾನ ಪ್ರದರ್ಶನ ಕೆದಂಬಾಡಿ ಸನ್ಯಾಸಿಗುಡ್ಡೆಯ ಸದ್ಗುರು ಗೋಪಾಲ ನಾಯರ್ಸ್‍ಸಭಾಭವನದಲ್ಲಿ ಇತ್ತೀಚೆಗೆ ಸಂಪನ್ನಗೊಂಡಿತು.
ಯಕ್ಷಕಲಾ ಕೇಂದ್ರ ಮತ್ತು ಎನ್ಎಸ್‍ಕಿಲ್ಲೆ ಪ್ರತಿಷ್ಠಾನ ತಿಳುವಳಿಕೆ ಜ್ಞಾಪಕ ಪತ್ರದ ಒಡಂಬಡಿಕೆಯಂತೆ ಸಾಂಸ್ಕೃತಿಕ ವಿಸ್ತರಣೆ ಕಾರ್ಯಕ್ರಮ, ದತ್ತುಗ್ರಾಮ ಕೆದಂಬಾಡಿಯಲ್ಲಿ ವೈಭವದಿಂದ ಜರಗಿತು. ಮೋಕ್ಷ ಸಂಗ್ರಾಮ ಯಕ್ಷಗಾನ ಪ್ರಸಂಗವನ್ನುಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಪ್ರದರ್ಶಿಸಿದರು.

ಯಕ್ಷಕಲಾ ಕೇಂದ್ರದ ನಿರ್ದೇಶಕ, ಉಪನ್ಯಾಸಕ ಪ್ರಶಾಂತ್ ರೈ ಮುಂಡಾಳಗುತ್ತು ಸಾಂಸ್ಕೃತಿಕ ವಿಸ್ತರಣೆ ಚಟುವಟಿಕೆಗಳ ಮಾಹಿತಿ ನೀಡಿದರು.
ಉಪಪ್ರಿನ್ಸಿಪಾಲ್‍ಡಾ.ವಿಜಯಕುಮಾರ್ ಮೊಳೆಯಾರ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪಸರಿಸುವ ಉದ್ದೇಶದಿಂದ ಕಿಲ್ಲೆಪ್ರತಿಷ್ಠಾನದೊಂದಿಗೆ ತಿಳುವಳಿಕೆ ಜ್ಞಾಪಕ ಪತ್ರ ಒಡಂಬಡಿಕೆ ಮಾಡಿಕೊಂಡಿದೆ ಎಂದರು.
ಪ್ರಿನ್ಸಿಪಾಲ್‍ಡಾ.ಆಂಟನಿ ಪ್ರಕಾಶ್ ಮೊಂತೆರೋ ಸಾಹಿತ್ಯ ಮತ್ತು ಸಂಸ್ಕೃತಿಯ ವಿಸ್ತರಣೆಗೆ ವಿಶೇಷ ಪ್ರಾತಿನಿಧ್ಯ ನೀಡುತ್ತಿದ್ದು ಸಾಮಾಜಿಕ ಔನ್ನತ್ಯಕ್ಕೆ ಹೇತುವಾದ ಅನೇಕ ಕಾರ್ಯಕ್ರಮಗಳನ್ನು ಸಂಯೋಜಿಸಲು ಸರ್ವರೂ ಸಹಕರಿಸುವಂತೆ ವಿನಂತಿಸಿದರು. ಯಕ್ಷಗಾನ ಪ್ರದರ್ಶನದ ಪ್ರಾಯೋಜಕತ್ವವನ್ನು ನಿವೃತ್ತ ಶಿಕ್ಷಕ ಮುಂಡಾಳಗುತ್ತು ಈಶ್ವರ ಆಳ್ವ ಸ್ಮರಣಾರ್ಥ ಅವರ ಕುಟುಂಬಿಕರು ನೀಡಿದರು.
ವೇದಿಕೆಯಲ್ಲಿ ತೆಂಕುತಿಟ್ಟು ಯಕ್ಷಗಾನದ ಹಿರಿಯ ಹಿಮ್ಮೇಳವಾದಕರಾದ ಪದ್ಯಾಣ ಶಂಕರನಾರಾಯಣ ಭಟ್ಟ, ಪದ್ಯಾಣ ಜಯರಾಮಭಟ್ಟ , ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಜಯಶಂಕರ ರೈ ಬೆದ್ರುಮಾರ್, ಪದಾಧಿಕಾರಿಗಳಾದ ಮೋಹನ ಆಳ್ವಮುಂಡಾಳಗುತ್ತು, ಸಂತೋಷ್ ಕುಮಾರ್ ರೈ ಕೋರಂಗ, ಕರುಣಾಕರ ರೈ ಕೋರಂಗ, ಸುರೇಶ್ ರೈ ಮುಂಡಾಳಗುತ್ತು, ವಿಜಯ ಕುಮಾರ್ ರೈ ಕೋರಂಗ, ಕೈಲಾಸ್ ಕೆದಂಬಾಡಿ, ರಾಘವ ಗೌಡ ಕೆರೆಮೂಲೆ ಉಪಸ್ಥಿತರಿದ್ದರು.