ಸುಳ್ಯ; ಮಲಗಿದಲ್ಲೇ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬಾಳುಗೋಡಿನ ಕಿರಿಭಾಗದಲ್ಲಿ ನಡೆದಿದೆ.
ಕಿರಿಭಾಗದ ದಿ. ಸೀತಾರಾಮ ಗೌಡ ಎಂಬವರ ಪುತ್ರ ಪವಿತ್ ಕಿರಿಭಾಗ (35) ಮೃತಪಟ್ಟವರು.
ಪವಿತ್ ಹಾಗೂ ಅವರ ತಾಯಿ ಇಬ್ಬರೇ ಮನೆಯಲ್ಲಿ ವಾಸವಿದ್ದು ಅವರ ತಾಯಿ ಕೆಲ ದಿನಗಳ ಹಿಂದೆ ಮೈಸೂರಿನಲ್ಲಿರುವ ತಮ್ಮ ಮಗಳ ಮನೆಗೆ ತೆರಳಿದ್ದರು. ಪವಿತ್ ಒಬ್ಬರೇ ಮನೆಯಲ್ಲಿದ್ದರು. ಅತಿಯಾದ ಮದ್ಯ ಸೇವನೆ ಮಾಡುತ್ತಿದ್ದ ಪವಿತ್ ಕುಡಿದು ಮಲಗಿದವರು ಅಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.