ಮನೆಯಿಂದ ಹೊರಟು ಹೋದ ವಿದ್ಯಾರ್ಥಿ ಮನೋಜ್‍ ನಾಪತ್ತೆ

ಪುತ್ತೂರು: ಮನೆಯಿಂದ ಹೊರಹೋದ ವಿದ್ಯಾರ್ಥಿಯೋರ್ವ ನಾಪತ್ತೆಯಾಗಿರುವ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಹರುನಗರದ ಗಣೇಶ್ ಬಾಗ್‍ ನ ಲಕ್ಷ್ಮೀ ಪ್ರಸಾದ್ ಕಂಪೌಂಡ್‍ ನಿವಾಸಿ ದಿ.ಕೇಶವಮೂರ್ತಿ ಎಂಬವರ ಪುತ್ರ ಮನೋಜ್ (20) ನಾಪತ್ತೆಯಾದ ವಿದ್ಯಾರ್ಥಿ.

ಸಂತ ಫಿಲೋಮಿನಾ ಕಾಲೇಜಿನ 2ನೇ ವರ್ಷದ ಬಿಎಸ್ಸಿ ಪದವಿ ವಿದ್ಯಾರ್ಥಿಯಾಗಿದ್ದ ಮನೋಜ್‍ ಸ್ನೇಹಿತನ ಮನೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟು ಬಳಿಕ ಮನೆಗೆ ಹಿಂತಿರುಗಿಲ್ಲ. ಸಂಬಂಧಿಕರಲ್ಲಿ, ಸುತ್ತಮುತ್ತಲಿನವರಲ್ಲಿ ವಿಚಾರಿಸಿದರೂ ಪತ್ತೆಯಾಗಿಲ್ಲ.ಆತನ ಮೊಬೈಲ್‍ ಸ್ವಿಚ್‍ ಆಫ್‍ ಆಗಿದೆ.

































 
 

 ಈ ಕುರಿತು ಪ್ರವುಲ್ಲ ಸ್ವಾಮಿ ಎಂಬವರು ಪೊಲೀಸರಿಗೆ ಸಲ್ಲಿಸಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ಮನೋಜ್ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಲ್ಲಿ ಪುತ್ತೂರು ನಗರ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top