ಡಿವೈಡರ್ ಗೆ ಕಾರು ಡಿಕ್ಕಿ : ಪ್ರಯಾಣಿಕರು ಪಾರು

ಉಡುಪಿ: ಕಾರೊಂದು ರಸ್ತೆ ವಿಭಾಜಕದ ಗಾರ್ಡ್ ಗೆ ಡಿಕ್ಕಿಯಾಗಿ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ರಾಷ್ಟ್ರೀಯ ಹೆದ್ದಾರಿ 66 ಉದ್ಯಾವರದಲ್ಲಿ  ಶನಿವಾರ ರಾತ್ರಿ ನಡೆದಿದೆ.

ಉಡುಪಿಯಿಂದ ಪಡುಬಿದ್ರೆಗೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಪಾಸ್ ನ  ರಸ್ತೆ ವಿಭಾಜದ ಬಳಿ ಡಿವೈಡರ್ ಮೇಲೇರಿದ್ದು ಡಿವೈಡರ್ ಮೇಲಿನ ಗಾರ್ಡ್ ಗೆ ಡಿಕ್ಕಿಯಾಗಿ ನಿಂತಿದೆ. ಕಾರಿನಲ್ಲಿ ಮಹಿಳೆ ಸಹಿತ ಐದು ಮಂದಿ ಪ್ರಯಾಣಿರಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಅಪಘಾತ ನಡೆದ ವೇಳೆ ಆ ದಾರಿಯಾಗಿ ಹೋಗುತ್ತಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗಾಯಾಳುಗಳ ನೆರವಿಗೆ ದಾವಿಸಿದ್ದು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ನೆರವಿನೊಂದಿಗೆ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲು ಸಹಕರಿಸಿದರು. ಕಾಪು ಪೋಲಿಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top