ಉಳ್ಳಾಲ: ಮನೆಯಿಂದ ನಾಪತ್ತೆಯಾಗಿದ್ದ ಅವಿವಾಹಿತ ವ್ಯಕ್ತಿಯ ಮೃತದೇಹ ಪಕ್ಕದ ಪಾಳು ಬಿದ್ದ ಬಾವಿಯಲ್ಲಿ ಇಂದು ಪತ್ತೆಯಾದ ಘಟನೆ ಕೊಟ್ಟ ಕುಜುಮಗದ್ದೆಯಲ್ಲಿ ನಡೆದಿದೆ.
ಮೂಲತ: ಜಪ್ಪು ಗೋರ್ದಂಡು ವಿವಾಸಿಯಾದ ಪ್ರಸಾದ್ (44) ಮೃತಪಟ್ಟವರು.
ಪ್ರಸಾದ್ ಕಳೆದ ಕೆಲ ವರ್ಷಗಳಿಂದ ಕುಟುಂಬ ಸಮೇತ ಕುಜುಮಗದ್ರೆಯಲ್ಲಿ ನೆಲೆಸಿದ್ದರು. ಅವರು ಅವಿವಾಹಿತರಾಗಿದ್ದು ಕೆಲ ದಿನಗಳಿಂದ ಖಿನ್ನತೆಗೊಳಗಾಗಿದ್ದರೆಂದು ಹೇಳಲಾಗಿದೆ. ಮನೆಯಲ್ಲಿ ಮೊಬೈಲ್ ಫೋನ್ ಬಿಟ್ಟು ಹೋದ ಪ್ರಸಾದ್ ಅವರು ಮತ್ತೆ ಸಂಪರ್ಕಕ್ಕೆ ಸಿಗದೆ ನಿನ್ನೆ ಮಧ್ಯಾಹ್ನ ನಾಪತ್ತೆಯಾಗಿದ್ದರು. ಈ ವೇಳೆ ಮನೆ ಮಂದಿ ನೆರೆಹೊರೆಯವರು ಹುಡುಕಾಡಿದಾಗ ಇಂದು ಬೆಳಿಗೆ ಮನೆ ಹತ್ತಿರದ ಪಾಳು ಬಿದ್ದ ಬಾವಿಯ ಬಳಿ ಪ್ರಸಾದ್ ಅವರ ಪಾದುಕೆ ದೊರೆತಿದ್ದು ಈ ಹಿನ್ನೆಲೆಯಲ್ಲಿ ಪಾಳುಯಲ್ಲಿ ನೋಡಿದಾಗ ಮೃತದೇಹ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದ್ದು ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿದ್ದಾರೆ.
ಮೃತರು ತಾಯಿ, ತಂದೆ, ಇಬ್ಬರು ಸಹೋದರರು, ಓರ್ವ ಸಹೋದರಿಯನ್ನು ಅಗಲಿದ್ದಾರೆ.