ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ ಮಂಗಳೂರಿನ ಕಛೇರಿ ಆದಿಚುಂಚನಗಿರಿ ಶ್ರೀಗಳ ದಿವ್ಯ ಅನುಗ್ರಹದೊಂದಿಗೆ ಹಾಗೂ ಆದಿಚುಂಚನಗಿರಿ ಮಂಗಳೂರು ಶ್ರೀಗಳ ದಿವ್ಯ ಆಶೀರ್ವಾದದೊಂದಿಗೆ ಶನಿವಾರ ಮಂಗಳೂರಿನ ಒಕ್ಕಲಿಗರ ಭವನದ 1 ನೇ ಮಹಡಿಯಲ್ಲಿ ನವೀಕೃತಗೊಂಡು ಶುಭಾರಂಭಗೊಂಡಿತು.
ಮುಂಜಾನೆ ಗಣಹೋಮ ಪೂಜಾ ಕಾರ್ಯಕ್ರಮ ನೆರವೇರುವ ಮೂಲಕ ಸಮಸ್ತ ದಕ್ಷಿಣ ಕನ್ಡಡ ಜಿಲ್ಲೆಯ ಒಕ್ಕಲಿಗರ ಸೇವೆಗಾಗಿ ಸಿದ್ದವಾಗಿದೆ. ಸಮುದಾಯದ ಅನೇಕ ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.
ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ ಮಂಗಳೂರಿನ ಅಧ್ಯಕ್ಷ ಡಿ.ಬಿ. ಬಾಲಕೃಷ್ಣ ಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಎನ್.ಎ. ಜ್ನಾನೇಶ್ ಎಲ್ಲರನ್ನೂ ಸ್ವಾಗತಿಸಿ ಬರಮಾಡಿಕೊಂಡರು.
ಉಪಾಧ್ಯಕ್ಷ ಭಾಸ್ಕರ ದೇವಸ್ಯ, ಕೋಶಾಧಿಕಾರಿ ವಿಶ್ವನಾಥ ಗೌಡ ಪುತ್ತೂರು, ಜಂಟಿ ಕಾರ್ಯದರ್ಶಿ ದಾಮೋದರ್ ಗೌಡ, ಜಂಟಿ ಕೋಶಾಧಿಕಾರಿ ಸೂರಜ್ ಕುಮಾರ್ ಯು., ಪ್ರಧಾನ ಸಂಚಾಲಕ ರಕ್ಷಿತ್ ಪುತ್ತಿಲ, ನಿರ್ಧೆಶಕರಾದ ವಿಜಯ ಗೌಡ ಬೆಳ್ತಂಗಡಿ, ಅನೂಪ್ ನರಿಯೂರು , ಡಾ. ಶಾತರಾಜ್, ಲಿಂಗಯ್ಯ ಮಂಗಳೂರು, ವಿಶ್ವನಾಥ ನಾಯ್ತೊಟ್ಟು, ಮಧುರ ಜಗದೀಶ್, ಸಮುದಾಯದ ಪ್ರಮುಖರಾದ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಥಾಪನ ಸಮಿತಿಯ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ವಕೀಲ ನವೀನ್ ಚಿಲ್ಪಾರ್, ನಿವೃತ್ತ ಪ್ರೊಪೆಸರ್ ಗುರುದೇವ್ ಯು.ಬಿ., ಕೃಷ್ಣಪ್ಪ ಗೌಡ ಸುರತ್ಕಲ್, ತಾರಸಿ ಕೃಷಿಕ ಖ್ಯಾತಿಯ ಕೃಷ್ಣಪ್ಪ ಪಡ್ಡಂಬೈಲ್, ಮಹೇಶ್ ಮೋಂಟಡ್ಕ, ಸುಂದರ ಜಿ ಯಚ್, ಮಹೇಶ್ ನಡುತೋಟ, ಕೃಷ್ಣವೇಣಿ ಬಾಲಕೃಷ್ಣ, ರಾಮಚಂದ್ರ ಗೌಡ ಮೊದಲಾದ ಗಣ್ಯರು ಉಪಸ್ಥಿತರಿದ್ದರು.