ಸರ್ವಸ್ಪರ್ಶಿ, ನಾಯಕತ್ವ ಗುಣ ಬೆಳೆಸುವಲ್ಲಿ ಸದಸ್ಯತ್ವ ಅಭಿಯಾನದ ಪಾತ್ರ ಮಹತ್ವದ್ದು : ಕ್ಯಾ.ಬ್ರಿಜೇಶ್‍ ಚೌಟ | ಎರಡನೇ ಹಂತದ ಅಭಿಯಾನದಲ್ಲಿ ದ.ಕ.ಜಿಲ್ಲೆಯಲ್ಲಿ 3.5 ಲಕ್ಷ ಸದಸ್ಯತ್ವದ ಗುರಿ

ಪುತ್ತೂರು: ಎಲ್ಲಾ ರೀತಿಯಲ್ಲೂ ಸರ್ವ ಸ್ಪರ್ಶಿಯಾಗಿ, ಕಾರ್ಯಕರ್ತರು ಬೆಳೆದು, ನಾಯಕರಾಗಿ ಬೆಳೆಯುವಲ್ಲಿ ಸದಸ್ಯತ್ವ ಅಭಿಯಾನ ಪ್ರಮುಖ ಕಾರಣವಾಗಿದ್ದು, ಜಿಲ್ಲೆ, ರಾಜ್ಯಗಳಲ್ಲಿ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ಸೆ.1 ರಿಂದ 30 ರ ತನಕ ಮೊದಲನೇ ಹಂತದ ಅಭಿಯಾನದಲ್ಲಿ ಸುಮಾರು 2.50 ಲಕ್ಷ ಸದಸ್ಯರು ನೊಂದಾವಣೆಗೊಂಡಿದ್ದಾರೆ ಎಂದು ದ.ಕ.ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್‍ ಚೌಟ ತಿಳಿಸಿದರು.

ಅವರು ಶನಿವಾರ ಬಿಜೆಪಿ ಕಚೇರಿಯಲ್ಲಿ ಎರಡನೇ ಹಂತದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

2ನೇ ಹಂತದ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗುತ್ತಿದ್ದು, ಸಾರ್ವಜನಿಕ ಸ್ಥಳ, ಸಾಮೂಹಿಕವಾಗಿ ಜನ ಸೇರುವ ಕಡೆಗಳಿಗೆ ತೆರಳಿ ಸದಸ್ಯತ್ವಅಭಿಯಾನ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ ಸುಮಾರು 3.50 ಲಕ್ಷ ಸದಸ್ಯತ್ವದ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.































 
 

ಈಗಾಗಲೇ ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಉಡುಪಿ ಹಾಗೂ ದ.ಕ.ಜಿಲ್ಲಾ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ ಗೆ ಆಯ್ಕೆಯಾಗಲು ಯುವ ಬಿಜೆಪಿ ನಾಯಕ ಕಿಶೋರ್ ಕುಮಾರ್ ಬೊಟ್ಯಾಡಿ ಅವರನ್ನು ಕೇಂದ್ರ ಸಂಸದೀಯ ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ 13 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಯ ನಿರ್ವಹಣೆಗಾಗಿ ತಂಡಗಳನ್ನು ಮಾಡಿ ತಂಡದ ಮೂಲಕ ಮತದಾರರನ್ನು ತಲುಪುವ ಕೆಲಸ ಆಗಲಿದೆ. ಸುಮಾರು 3.5 ಸಾವಿರಕ್ಕೂ ಅಧಿಕ ಮತದಾರರನ್ನು ಹೊಂದಿದ್ದು, ಕಿಶೋರ್ ಕುಮಾರ್ ಅವರು ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ನಮಗಿದೆ. ಈ ಮೂಲಕ ಅವರು ಬಿಜೆಪಿ ವಿಚಾರ, ಕಾರ್ಯಕರ್ತರು, ಒಟ್ಟಾರೆ ಸ್ಥಳೀಯ ಸಂಸ್ಥೆಗಳ ಸಮಸ್ಯೆಗಳಿಗೆ ಧ್ವನಿಯಾಗಲಿದ್ದಾರೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ನಗರ ಮಂಡಲ ಅಧ್ಯಕ್ಷ ಪಿ.ಬಿ.ಶಿವಕುಮಾರ್, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಬಿಜೆಪಿ ಜಿಲ್ಲಾ ನಾಯಕ ಪ್ರಸನ್ನ ಕುಮಾರ್ ಮಾರ್ತ, ಸುನಿಲ್, ನಗರಸಭೆ ಅಧ್ಯಕ್ಷೆ ಲೀಲಾವತಿ, ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top