ನ.2 : ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ನಿಂದ ದೀಪಾವಳಿ ಪ್ರಯುಕ್ತ ವಸ್ತ್ರ ವಿತರಣಾ ಸಮಾರಂಭ | 75 ಸಾವಿರ ಮಂದಿಗೆ ಈ ಬಾರಿ ವಸ್ತ್ರ ವಿತರಣೆ, 45 ಸಾವಿರ ಮಂದಿಗೆ ಊಟದ ವ್ಯವಸ್ಥೆ

ಪುತ್ತೂರು : ಪ್ರತೀ ವರ್ಷ ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ದೀಪಾವಳಿ ಸಂದರ್ಭದಲ್ಲಿ ನಡೆಯುವ ವಸ್ತ್ರವಿತರಣಾ ಸಮಾರಂಭ ‘ಅಶೋಕ ಜನಮನ- 2024’ ನ.2 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.

ಶುಕ್ರವಾರ ಟ್ರಸ್ಟ್‍ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಕಾರ್ಯಕ್ರಮದ ವಿವರ ನೀಡಿದರು.

ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ. ಪಕ್ಷ, ಜಾತಿ, ಮತ ಬಿಟ್ಟು ಎಲ್ಲರನ್ನು ಸೇರಿಸಿಕೊಂಡು ಮಾಡುವ ಕಾರ್ಯಕ್ರಮ. ಸುಮಾರು 3.50 ಕೋಟಿ ರೂ. ವೆಚ್ಚದಲ್ಲಿ ನಡೆಯುವ ಕಾರ್ಯಕ್ರಮದ ಅಂಗವಾಗಿ ಈ ಬಾರಿ 75000 ಜನಕ್ಕೆ ವಸ್ತ್ರ ವಿತರಣೆ ಹಾಗೂ 40 ರಿಂದ 45 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಕಾರ್ಯಕ್ರಮಕ್ಕೆ ನೀಡಲಾಗುವ ಹೆಸರುಗಳ ಕುರಿತು ಈಗಾಗಲೇ 400 ಹೆಸರುಗಳು ಬಂದಿದ್ದು, ಆಯ್ಕೆಗೊಳಿಸಿ ಹೆಸರನ್ನು ಇಡಲಾಗುವುದು ಎಂದು ತಿಳಿಸಿದರು.































 
 

ಈ ಬಾರಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಆಹ್ವಾನ ನೀಡಲಾಗಿದ್ದು, ಕಾರ್ಯಕ್ರಮವನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ.

ಕಳೆದ ಬಾರಿಯಂತೆ ಈ ಬಾರಿಯೂ ಗೂಡುದೀಪ ಸ್ಪರ್ಧೆಗಳನ್ನು ಏರ್ಪಡಿಸಿ ಪ್ರಥಮ 10, ದ್ವಿತೀಯ 7 ಹಾಗೂ ತೃತೀಯ ಬಹುಮಾನವಾಗಿ 5 ಸಾವಿರ ರೂ. ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದ ಯಶಸ್ಸಿಗಾಗಿ ಗ್ರಾಮಗಳಿಗೆ ಭೇಟಿ ನೀಡುವ ತಂಡಗಳನ್ನು ಈಗಾಗಲೇ ರಚಿಸಲಾಗಿದೆ. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಗ್ರಾಮ ಭೇಟಿ ಹಮ್ಮಿಕೊಳ್ಳಲಾಗುವುದು. ಉಳಿದಂತೆ ಆಮಂತ್ರಣವನ್ನು ವಾಟ್ಸಾಪ್ ನಲ್ಲಿ ಎಲ್ಲರಿಗೂ ಕಳುಹಿಸುವ ಕುರಿತು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಕಳೆದ ಬಾರಿಯಂತೆ ಸಮಾಜದಲ್ಲಿ ಸೂಕ್ಷ್ಮ ವಲಯದಲ್ಲಿ ಕೆಲಸ ಮಾಡುವವರು, ಇದುವರೆಗೆ ಯಾರೂ ಗುರತಿಸದವರಿಗೆ ಸನ್ಮಾನ ನಡೆಯಲಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಕಾವು ಹೇಮನಾಥ ಶೆಟ್ಟಿ. ಟ್ರಸ್ಟಿನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ನಿಹಾಲ್ ರೈ, ಅಮಳ ರಾಮಚಂದ್ರ. ಮುರಳೀಧರ ರೈ ಮಠಂದಬೆಟ್ಟು, ನಿರಂಜನ ರೈ ಮಠಂದಬೆಟ್ಟು, ಜಯಪ್ರಕಾಶ ಬದಿನಾರು, ಕೃಷ್ಣ ಪ್ರಸಾದ್ ಬೊಳ್ಳಾವು ಉಪಸ್ಥಿತರಿದ್ದರು.

ಬಾಲಕೃಷ್ಣ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top