ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಸಿಯಾ ಭಾವಿನ್ ಸವಜಾನಿಗೆ ಚಿನ್ನದ ಪದಕ

ಪುತ್ತೂರು: ಪುತ್ತೂರು : ವಿದ್ಯಾಭಾರತಿ ಅಖಿಲ ಭಾರತೀ ಶಿಕ್ಷಣ ಸಂಸ್ಥೆ  ಮಧ್ಯಪ್ರದೇಶದ ಮಂದಸೌ‌ರ್ ಜಿಲ್ಲೆಯ ನಗರ ಪಾಲಿಕೆ ಪರಿಷದ್ ಪಂಡಿತ್ ದೀನ್ ದಯಾಳ್ ತರಂತಾಲ್ ನಲ್ಲಿ ಆಯೋಜಿಸಿದ ವಿದ್ಯಾ ಭಾರತಿ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ 9ನೇ ತರಗತಿ ವಿದ್ಯಾರ್ಥಿನಿ ಸಿಯಾ ಭಾವಿನ್ ಸವಜಾನಿ ಚಿನ್ನದ ಪದಕ ಪಡೆದು ರಾಜಕೋಟ್ ನಲ್ಲಿ ಇಂದು ನಡೆಯುವ ಎಸ್ ಜಿ ಐ ಎಫ್ ಮೀಟ್ ಗೆ ಆಯ್ಕೆಯಾಗಿದ್ದಾರೆ.

200 ಮೀಟರ್ ಫ್ರೀ ಸ್ಟೈಲ್ ಮತ್ತು 4×100 ಮೆಡ್ಲೆಯ್ ರಿಲೇ, 4×100 ರಿಲೇ ಫ್ರೀ ಸ್ಟೈಲ್ ನಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. 100ಮೀಟರ್ ಬ್ಯಾಕ್ ಸ್ಟೋಕ್, 100 ಮೀಟರ್ ಫ್ರೀ ಸ್ಟೈಲ್ ನಲ್ಲಿ ಬೆಳ್ಳಿಪದಕ ಪಡೆದಿದ್ದಾರೆ.

ಸಿಯಾ ಪುತ್ತೂರಿನ ಬಾಲವನದ ಈಜು ತರಬೇತುದಾರರಾದ ಪಾರ್ಥ ವಾರಣಾಸಿ, ನಿರೂಪ್ ಕೋಟ್ಯಾನ್ ಮತ್ತು ದೀಕ್ಷಿತ್‌ ರಿಂದ ತರಬೇತಿ ಪಡೆಯುತ್ತಿದ್ದಾರೆ. ನೆಲ್ಲಿಕಟ್ಟೆ ನಿವಾಸಿ ಭಾವಿನ್ ಅಶೋಕ್ ಸವಜಾನಿ ಮತ್ತು ಸಹನಾ ಭಾವಿನ್ ಸವಜಾನಿ ದಂಪತಿ ಪುತ್ರಿ.

































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top