ಪುತ್ತೂರು: ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಮುಳಿಯ ಜುವೆಲ್ಸ್ ನಲ್ಲಿ ಆಭರಣಗಳ ಮಾರಾಟ ಹಬ್ಬ ‘ಮುಳಿಯ ಚಿನ್ನೋತ್ಸವ’ಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಒಂದು ತಿಂಗಳ ಕಾಲ ನಡೆಯುವ ಮುಳಿಯ ಚಿನ್ನೋತ್ಸವಕ್ಕೆ ಶಿಕ್ಷಕಿ ಉಮಾ ವಿ.ಎಸ್. ಕೆದಿಲಾಯ ಚಾಲನೆ ನೀಡಿ ಮಾತನಾಡಿ, ಕಳೆದ 30 ವರ್ಷಗಳಿಗೂ ಮಿಕ್ಕಿ ಸಮಯಗಳಿಂದ ಮುಳಿಯ ಸಂಸ್ಥೆಯ ಗ್ರಾಹಕನಾಗಿದ್ದೇನೆ. ಸಂಸ್ಥೆಯಲ್ಲಿ ಇರುವ ಚಿನ್ನಾಭರಣಗಳ ಸಂಗ್ರಹ ಹಾಗೂ ಉತ್ತಮ ಸೇವೆ ಸಂಸ್ಥೆಯನ್ನು ಎತ್ತರಕ್ಕೆ ಏರುವಂತೆ ಮಾಡಿದೆ. ವ್ಯವಹಾರದ ಸಂದರ್ಭದಲ್ಲಿ ಆಡಳಿತ ಮಂಡಳಿ ಹಾಗೂ ಸಿಬಂದಿಯ ಹೊಂದಾಣಿಗೆ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಉದ್ಯಮಿ ಸುಹಾಸ್ ಮರಿಕೆ ಮಾತನಾಡಿ, ಮುಳಿಯ ಸಂಸ್ಥೆಯ ನಿಷ್ಕಲ್ಮಶ ಸೇವೆ, ಎಲ್ಲರೂ ನಮ್ಮವರು ಎಂದುಕೊಂಡು ಮಾಡುವ ವ್ಯವಹಾರ ಎಲ್ಲರಿಗೂ ಮೆಚ್ಚುಗೆಯಾಗುವಂತದ್ದು ಎಂದರು.
ಮುಖ್ಯ ಅತಿಥಿ ಲಲಿತಾ ಭಟ್ ಮಾತನಾಡಿ, ಚಿನ್ನ ಅಂದರೆ ಶುಭ. ನವರಾತ್ರಿ, ದೀಪಾವಳಿಯಂತಹ ಹಬ್ಬಗಳ ಶುಭ ಸಂದರ್ಭದಲ್ಲಿ ಚಿನ್ನೋತ್ಸವ ಹಮ್ಮಿಕೊಂಡಿರುವುದು ಖುಷಿಯ ವಿಚಾರ ಎಂದರು.
ಚಿನ್ನೋತ್ಸವದ ಪ್ರಥಮ ಖರೀದಿದಾರರಾದ ಉದ್ಯಮಿ ಗಣೇಶ್ ಭಟ್ ಹಾಗೂ ಮನೆಯವರಿಗೆ ಚಿನ್ನ ಹಸ್ತಾಂತರಿಸಲಾಯಿತು.
ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣನಾರಾಯಣ ಮುಳಿಯ ಪ್ರಾಸ್ತಾವಿಕವಾಗಿ ಮಾತನಾಡಿ, ಚಿನ್ನ, ಭೂಮಿ ಉಪಯೋಗ ಮಾಡಿದ ಮೇಲೂ ಮೌಲ್ಯ ಹೆಚ್ಚಾಗುವ ವಿಶೇಷತೆಯನ್ನು ಹೊಂದಿದೆ. ಎಲ್ಲಡೆಯೂ, ಯಾವುದೇ ಸಮಯದಲ್ಲೂ ಹಣದ ಆವಶ್ಯಕತೆಯನ್ನು ಚಿನ್ನ ಪೂರೈಸುತ್ತದೆ. ಹಾಗಾಗಿ ಭೂಮಿಗಿಂತಲೂ ಚಿನ್ನದ ಮೌಲ್ಯವೇ ಜಾಸ್ತಿ. ಹಬ್ಬಗಳ ಸಂದರ್ಭದಲ್ಲಿ ಚಿನ್ನ ಖರೀದಿಸುವ ಗ್ರಾಹಕರಿಗೆ ಮುಳಿಯ ಸಂಸ್ಥೆ ಚಿನ್ನದ ಉತ್ಸವವನ್ನು ಹಮ್ಮಿಕೊಂಡಿದೆ ಎಂದರು.
ಚಿನ್ನೋತ್ಸವದಲ್ಲಿ ಟರ್ಕಿ ರೂಬಿ ಡಿಸೈನ್, ವಜ್ರಾಭರಣಗಳು ಸೇರಿದಂತೆ 1200 ಅಧಿಕ ಡಿಸೈನ್ ನ ಚಿನ್ನಾಭರಣಗಳು ಗ್ರಾಹಕರಿಗೆ ಲಭ್ಯವಿದೆ. ನ.5 ರತನಕ ಚಿನ್ನೋತ್ಸವ ನಡೆಯಲಿದ್ದು, ಗ್ರಾಃಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ವಿನಂತಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕಿ ಅಶ್ವಿನಿಕೃಷ್ಣ ಮುಳಿಯ, ಶೋ ರೂಂ ಮ್ಯಾನೇಜರ್ ರಾಘವೇಂದ್ರ ಪಾಟೀಲ್ ಉಪಸ್ಥಿತರಿದ್ದರು.
ಸಿಬ್ಬಂದಿ ಹರಿಣಾಕ್ಷಿ ಪ್ರಾರ್ಥಿಸಿದರು. ಫ್ಲೋರ್ ಮ್ಯಾನೇಜರ್ ಯತೀಶ್ ಸ್ವಾಗತಿಸಿ, ಆನಂದ ಕುಲಾಲ್ ವಂದಿಸಿದರು. ಫ್ಲೋರ್ ಮ್ಯಾನೇಜರ್ ಪ್ರವೀಣ್ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಚಿನ್ನೋತ್ಸವದ ಅಂಗವಾಗಿ ಗ್ರಾಹಕರ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಯಿತು.