ನಿನ್ನೆ ಮಧ್ಯರಾತ್ರಿ ಮತ್ತೆ ಹಿಜ್ಬುಲ್ಲ ಬಂಕರ್ ಮೇಲೆ ಬಾಂಬ್ ಮಳೆಗರೆದ ಇಸ್ರೇಲ್
ಟೆಲ್ ಅವೀವ್ : ಇಸ್ರೇಲ್ ಗುರುವಾರ ಮಧ್ಯರಾತ್ರಿ ಮತ್ತೊಮ್ಮೆ ಲೆಬನಾನ್‌ನ ಬೇರೂತ್ ನಗರದ ಮೇಲೆ ಬಾಂಬ್‌ಗಳ ಸುರಿಮಳೆಗೈದಿದೆ. ಈ ಸಲ ಇಸ್ರೇಲ್ ಗುರಿ ಹಿಜ್ಬುಲ್ಲ ಉಗ್ರ ಸಂಘಟನೆಯ ಹೊಸ ಮುಖ್ಯಸ್ಥ ಹಾಶೆಮ್ ಸಫಿಯುದ್ದೀನ್ ಆಗಿದ್ದ. ಹಿಜ್ಬುಲ್ಲ ಮುಖ್ಯಸ್ಥ ಹಸನ್ ನಸ್ರಲ್ಲನನ್ನು ಇಸ್ರೇಲ್ ಸೆ.27ರಂದು ಬಾಂಬ್ ದಾಳಿ ಮಾಡಿ ಕೊಂದು ಹಾಕಿದೆ. ಇದರ ಬೆನ್ನಿಗೆ ಅವನ ಸಮಕಾಲೀನ ಹಾಶೆಮ್ ಸಫಿಯುದ್ದೀನ್ ಉತ್ತರಾಧಿಕಾರಿಯಾಗಿ ನೇಮಕವಾಗಿದ್ದ.
ಆದರೆ ಹಾಶೆಮ್ ಸಫಿಯುದ್ದೀನ್ ಈ ದಾಳಿಯಲ್ಲಿ ಸತ್ತಿರುವುದು ಇನ್ನೂ ದೃಢಪಟ್ಟಿಲ್ಲ. ಇಸ್ರೇಲ್ ಈ ಕುರಿತಾಗಿ ಯಾವುದೇ ಹೇಳಿಕೆ ನೀಡಿಲ್ಲ.
ನಿನ್ನೆ ಮಧ್ಯರಾತ್ರಿ ಹಾಶೆಮ್ ಸಫಿಯುದ್ದೀನ್ ಬಂಕರ್‌ನೊಳಗಿನ ರಹಸ್ಯ ಕೋಣೆಯಲ್ಲಿ ಹಿಜ್ಬುಲ್ಲದ ಹಿರಿಯ ಕಮಾಂಡರ್‌ಗಳ ಜೊತೆಗೆ ಸಮಾಲೋಚನೆ ನಡೆಸುತ್ತಿದ್ದಾಗ ಇಸ್ರೇಲ್ ವಾಯುಪಡೆ ದಾಳಿ ನಡೆಸಿದೆ. ನಸ್ರಲ್ಲನನ್ನು ಕೊಂದ ಬಳಿಕ ನಡೆದ ಎರಡನೇ ದೊಡ್ಡ ಪ್ರಮಾಣದ ದಾಳಿ ಇದು ಎನ್ನಲಾಗಿದೆ. ಇದು ಹಿಂದಿನ ದಾಳಿಗಳಿಗಿಂತಲೂ ಮಾರಕವಾಗಿತ್ತು ಹಾಗೂ ಅಪಾರ ಪ್ರಮಾಣದಲ್ಲಿ ಸಾವು ಸಂಭವಿಸಿರುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ನಸ್ರಲ್ಲನನ್ನು ಸಾಯಿಸಲು ಬಳಸಿದ ತಂತ್ರವನ್ನೇ ಇಸ್ರೇಲ್ ಈ ದಾಳಿಗೂ ಬಳಸಿದೆ.
ಸೆ.27ರಂದು ಬೇರೂತ್ ಮೇಲೆ ನಡೆಸಿದ ದಾಳಿಯಲ್ಲಿ ಹಿಜ್ಬುಲ್ಲ ಮುಖ್ಯಸ್ಥ ನಸ್ರುಲ್ಲ ಸಹಿತ ಹಲವು ಉಗ್ರರು ಸತ್ತಿದ್ದಾರೆ. ಅನಂತರ ಸಫಿಯುದ್ದೀನ್ ಹಿಜ್ಬುಲ್ಲ ಮುಖಂಡನಾಗಿ ನೇಮಕಗೊಂಡಿದ್ದ. ಈತ ಹಿಜ್ಬುಲ್ಲದಲ್ಲಿ ನಸ್ರುಲ್ಲ ಬಳಿಕ ಎರಡನೇ ಸ್ಥಾನದಲ್ಲಿದ್ದ. ಹಿಜ್ಬುಲ್ಲದ ಜಿಹಾದ್ ಕೌನ್ಸಲ್, ರಾಜಕೀಯ ವ್ಯವಹಾರ ಇತ್ಯಾದಿಗಳ ಉಸ್ತುವಾರಿ ಹೊಂದಿದ್ದ. ಈತ ಹಿಜ್ಬುಲ್ಲ ಮುಖಂಡನಾದ ಬಳಿಕ ಇಸ್ರೇಲ್ ಅವನ ಬೆನ್ನುಹತ್ತಿತ್ತು. ನಿನ್ನೆ ನಡೆದ ದಾಳಿಯಲ್ಲಿ ಆತ ಸತ್ತಿರುವುದು ಬಹುತೇಕ ಖಚಿತ ಎಂದು ನ್ಯೂಯಾರ್ಕ್ ಟೈಮ್ಸ್ ವರದಿಗಳು ಹೇಳುತ್ತಿವೆ.