ಪುತ್ತೂರು : ಯುವ ಪ್ರೇರಣಾ ಕ್ರೀಡಾ ಮತ್ತು ಕಲಾ ಸಂಘ ಆಶ್ರಯದಲ್ಲಿ ಕ್ಯಾಂಪ್ಕೋ ಎಂಪ್ಲಾಯೀಸ್ ಯೂನಿಯನ್ ಮತ್ತು ಸಿಸಿಎಫ್ ರಿಕ್ರಿಯೇಷನ್ ಸೆಂಟರ್ ಇದರ ಸಹಭಾಗಿತ್ವ ದೊಂದಿಗೆ ಅ.2 ರಂದು ಸ್ವಚ್ಛ ಭಾರತ್ ಕಾರ್ಯಕ್ರಮ ನಡೆಯಿತು.
ದರ್ಬೆ ಸರ್ಕಲ್ ನಿಂದ ಕ್ಯಾಂಪ್ಕೋ ನೌಕರರ ವಸತಿ ಸಮ್ಮುಚ್ಚಯ ಮರೀಲು ತನಕ ರಸ್ತೆಯ ಉದ್ದಕ್ಕೂ ಕಸ ಪ್ಲಾಸ್ಟಿಕ್ ಸಂಗ್ರಹಿಸುತ್ತಾ ಜಾಥವು ಸಾಗಿತು.
ಮುಖ್ಯ ಅತಿಥಿಯಾಗಿ ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಮರೀಲ್, ಸಿಸಿಎಫ್ ಎಂಪ್ಲಾಯೀಸ್ ರಿಕ್ರಿಯೇಷನ್ ಸೆಂಟರ್ ಅಧ್ಯಕ್ಷ ಪ್ರಶಾಂತ್ ಡಿ.ಎಸ್, ಕ್ಯಾಂಪ್ಕೋ ಎಂಪ್ಲಾಯೀಸ್ ಯುನಿಯನ್ ಅಧ್ಯಕ್ಷ ಸಂತೋಷ್ ಭಟ್, ಯುವ ಪ್ರೇರಣಾ ಕ್ರೀಡಾ ಮತ್ತು ಕಲಾ ಸಂಘದ ಗೌರವ ಸಲಹೆಗಾರ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.
ಯುವ ಪ್ರೇರಣಾ ಕ್ರೀಡಾ ಮತ್ತು ಕಲಾ ಸಂಘ, ಕ್ಯಾಂಪ್ಕೋ ಎಂಪ್ಲಾಯೀಸ್ ಯೂನಿಯನ್ ಮತ್ತು ಸಿಸಿಎಫ್ ರಿಕ್ರಿಯೇಷನ್ ಸೆಂಟರ್ ಪದಾಧಿಕಾರಿಗಳು, ಕ್ಯಾಂಪ್ಕೋ ನೌಕರರು ಉಪಸ್ಥಿತರಿದ್ದರು.