ಪುತ್ತೂರು: ಹಿಂದಿ ಭಾಷೆಯ ಪ್ರಾವೀಣ್ಯತೆಯಿಂದ ವಿವಿಧ ವೃತ್ತಿಯಲ್ಲಿ ಆವಕಾಶಗಳು ದೊರಕುತ್ತವೆ ಹಾಗೂ ಈ ಅವಕಾಶಗಳು ಹಿಂದಿ ಭಾಷೆಯ ಪ್ರಸ್ತುತತೆಯನ್ನು ಒತ್ತಿಹೇಳುತ್ತವೆ ಎಂದು ಮಂಗಳೂರು ಕೆನರಾ ಕಾಲೇಜಿನ ಪ್ರಾಧ್ಯಾಪಕಿ ಡಾ.ಕಲ್ಪನಾ ಪ್ರಭು ಹೇಳಿದರು.
ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ನಡೆದ ಹಿಂದಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ, ಕಾಲೇಜಿನ ಪ್ರಾಂಶುಪಾಲ ರೆ..ಡಾ.ಆ್ಯಟನಿ ಪ್ರಕಾಶ್ ಮೊಂತೆರೋ ಮಾತನಾಡಿ, ಮಕ್ಕಳು ಭಾಷಾ ಕೌಶಲ್ಯವನ್ನು ಮೈಗೂಡಿಸಿಕೊಂಡು ಸೃಜನಶೀಲರಾಗಬೇಕು ಎಂದರು.
ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಾದ ಡೆಲ್ವಿನ್ಹಾ ಹಿಂದಿ ಕಲಿಕೆಯ ಅನುಭವ ಹಂಚಿಕೊಂಡರು.
ಐಶ್ವರ್ಯಾ ಮತ್ತು ತಂಡದವರು ಪ್ರಾರ್ಥನೆ ಹಾಡಿದರು. ವಿದ್ಯಾರ್ಥಿನಿಯರಾದ ಅಫ್ರಾ ಸ್ವಾಗತಿಸಿ, ದಿಶಾ ವಂದಿಸಿದರು. ಸಂಜನಾ ಹಾಗೂ ಕನೀಸ್ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಡಾ.ವಿಜಯಕುಮಾರ್ ಎಂ., ಹಿಂದಿ ವಿಭಾಗ ಮುಖ್ಯಸ್ಥ ಡಾ.ಡಿಂಪಲ್ ಫೆರ್ನಾಂಡಿಸ್, ವಿದ್ಯಾರ್ಥಿ ಸಂಯೋಜಕರಾದ ಖಲಂದರ್ ರ್ಸಬಿತ್, ಜಾಹ್ನವಿ ಉಪಸ್ಥಿತರಿದ್ದರು.
ಹಿಂದಿ ದಿನಾಚರಣೆ ಅಂಗವಾಗಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಕಾಲೇಜಿನ ಹಿಂದಿ ವಿಭಾಗದಿಂದ ಆಯೋಜಿಸಿ ಬಹುಮಾನ ವಿತರಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.