ಅಕ್ಷಯ ಕಾಲೇಜಿನಲ್ಲಿ ಅಟೋ ಡೆಸ್ಕ್‍ -3ಡಿಎಸ್‍ ಮ್ಯಾಕ್ಸ್ & 3ಡಿ ರೆಂಡರಿಂಗ್ ಕಾರ್ಯಾಗಾರದ ಪ್ರಮಾಣ ಪತ್ರ ವಿತರಣೆ

ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಇಂಟಿರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ ಎಲೈಟ್ ಇಂಟಿರಿಯರ್ ಡಿಸೈನ್ ಸಂಘಟನೆ ಹಾಗೂ ಭಾರತ್ ಅಕಾಡಮಿ ಆಫ್ ಲಿಬರಲ್ ಎಜುಕೇಷನ್ ಜಂಟಿಯಾಗಿ ಆರಂಭಿಸಿದ ಅಟೋ ಡೆಸ್ಕ್‍ -3ಡಿಎಸ್‍ ಮ್ಯಾಕ್ಸ್ & 3ಡಿ ರೆಂಡರಿಂಗ್ ಎಂಬ ವಿಷಯದಲ್ಲಿ  ನಡೆದ ಕಾರ್ಯಾಗಾರದ ಭಾಗವಾಗಿ ನಡೆದ ಸಮಾರೋಪ ಸಮಾರಂಭ ಕಾಲೇಜಿನ  ಸಭಾಂಗಣದಲ್ಲಿ ನಡೆಯಿತು. 

ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲ್ ಮಾತನಾಡಿ, ಕಾರ್ಯಾಗಾರಗಳು  ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡುವುದರ ಮೂಲಕ ವಿಷಯಗಳನ್ನು  ಮನದಟ್ಟು ಮಾಡುವಲ್ಲಿ ಸಹಕಾರಿಯಾಗಿದೆ. ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. 

ಬೇಸ್ ಅಕಾಡಮಿ ಸ್ಥಾಪಕ ನವೀನ್ ಗುರುರಾಜ್, ವಿದ್ಯಾರ್ಥಿಗಳಿಗೆ ಅಟೋ ಡೆಸ್ಕ್‍ -3ಡಿಎಸ್‍ ಮ್ಯಾಕ್ಸ್ & 3ಡಿ ರೆಂಡರಿಂಗ್ ವಿಷಯದ  ಬಗ್ಗೆ ಮಾರ್ಗದರ್ಶನ  ನೀಡಿದರು. 

































 
 

ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ.   ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ  ವೇದಿಕೆಯಲ್ಲಿದ್ದ ಗಣ್ಯರು ಪ್ರಮಾಣ ಪತ್ರ ವಿತರಿಸಿದರು. 

ಇಂಟಿರಿಯರ್ ಡಿಸೈನ್ ವಿಭಾಗದ ಮುಖ್ಯಸ್ಥ ರಕ್ಷನ್ ಟಿ.ಆರ್.  ಪ್ರಾಸ್ತಾವಿಕವಾಗಿ  ಮಾತನಾಡಿದರು.  ಭಾರತ್ ಅಕಾಡಮಿ ಆಫ್ ಲಿಬರಲ್ ಎಜುಕೇಷನ್ ಸಂಸ್ಥೆಯ ನಿರ್ವಾಹಕಿ ಸುಧಾ ಜಯರಾಮ್, ತರಬೇತುದಾರೆ ದೀಪ್ತಿ ಉಪಸ್ಥಿತರಿದ್ದರು. 

ಇಂಟಿರಿಯರ್ ಡಿಸೈನ್ ವಿಭಾಗದ ಸಹಪ್ರಾಧ್ಯಾಪಕಿ ಕಾವ್ಯ, ಶ್ರದ್ಧಾ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top