ಇಸ್ರೇಲ್ ಮೇಲೆ ಇನ್ನೊಂದು ಭಯೋತ್ಪಾದಕ ದಾಳಿ
ಟೆಲ್ ಅವಿವ್: ಇಸ್ರೇಲ್‌ನ ಟೆಲ್ ಅವಿವ್ ಸಮೀಪ ಜಾಫಾ ಪಟ್ಟಣದ ರೈಲು ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ನಡೆದ ಉಗ್ರರ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಮೃತರಾಗಿದ್ದಾರೆ.
ಇಬ್ಬರು ಬಂದೂಕುಧಾರಿಗಳು ಮನ ಬಂದಂತೆ ಗುಂಡು ಹಾರಿಸಿದ್ದಾರೆ. ನಂತರ ಅವರನ್ನು ಭದ್ರತಾ ಪಡೆ ಹತ್ಯೆ ಮಾಡಿದೆ. ಈ ಇಬ್ಬರು ವೆಸ್ಟ್‌ಬ್ಯಾಂಕ್‌ನ ಹೆಬ್ರಾನ್‌ನಿಂದ ಆಗಮಿಸಿದ್ದರು ಎಂದು ರಕ್ಷಣಾ ಪಡೆ ತಿಳಿಸಿದೆ.
ರೈಲು ನಿಲ್ದಾಣದ ಟ್ರಾಫಿಕ್ ಕ್ರಾಸಿಂಗ್ ಬಳಿ ಗುಂಡಿನ ದಾಳಿ ನಡೆದಿದ್ದು, ಆಗ ರೈಲೊಂದು ನಿಂತಿತ್ತು. ಹೆಚ್ಚಿನ ಸಾವುನೋವುಗಳು ಸಂಭವಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲು ನಿಲ್ದಾಣದಲ್ಲಿ ಇಬ್ಬರು ಮನಬಂದಂತೆ ಗುಂಡು ಹಾರಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ.