ಗಾಂಧೀಜಿಯವರ ಆಚಾರ-ವಿಚಾರ, ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ : ಜುಬಿನ್ ಮೊಹಪಾತ್ರ | ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಗಾಂಧಿ ಜಯಂತಿ

ಪುತ್ತೂರು: ಗಾಂಧೀಜಿಯವರ ಜಯಂತಿ ಆಚರಿಸಿ, ಮಾಲಾರ್ಪಣೆ ಮಾಡಿ, ಅವರ ಬಗ್ಗೆ ಮಾತನಾಡಿದರೆ ಮಾತ್ರಕ್ಕೆ ಹೆಚ್ಚು ಮಹತ್ವವಲ್ಲ. ಅವರ ಆಚಾರ-ವಿಚಾರ, ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು  ಸಮಾಜಕ್ಕಾಗಿ, ದೇಶಕ್ಕಾಗಿ ಕೆಲಸ ಮಾಡಿದಾಗ ಗಾಂಧಿ ಜಯಂತಿಗೆ ಆಚರಣೆಗೆ ಅರ್ಥ ಬರುತ್ತದೆ ಎಂದು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಹೇಳಿದರು.

ಗಾಂಧೀಕಟ್ಟೆ ಸಮಿತಿ ಹಾಗೂ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಅ.೨ರಂದು ಬಸ್ ನಿಲ್ದಾಣದ ಬಳಿಯ ಗಾಂಧೀಕಟ್ಟೆಯಲ್ಲಿ ನಡೆದ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ಗಾಂಧೀ ಪ್ರತಿಮೆಗೆ ಹಾರಾರ್ಪಣೆ ಮಾಡಿ ಮಾತನಾಡಿದರು.

ವಕೀಲರಾಗಿ, ಪ್ರಕೃತಿ ಸಂರಕ್ಷಕರಾಗಿ ಸ್ವಾತಂತ್ರ್ಯ ಹೋರಾಟಗಾರರಾಗಿ, ರಾಜಕಾರಣಿಯಾಗಿ, ಸಾಮಾಜಿಕ ಸುಧಾಕರರಾಗಿದ್ದು ಮಹಾತ್ಮ ಗಾಂಧೀಜಿಯವರು ಒಂದೇ ವ್ಯಕ್ತಿ ಹಲವು ವ್ಯಕ್ತಿತ್ವಗಳನ್ನು ಹೊಂದಿದ್ದವರು. ಅವರು ಮುಟ್ಟದ ಕ್ಷೇತ್ರಗಳಿಲ್ಲ. ಎಲ್ಲರಲ್ಲಿಯೂ ಸಮಾನತೆಯನ್ನು ಕಂಡಿರುವ ಅವರು ವಿವಿಧ ರಾಜವಂಶಗಳ ಮೂಲಕ ಹಂಚಿ ಹೋಗಿದ್ದ ಭಾರತದಲ್ಲಿ ನಾವು ಭಾರತೀಯರು ಎಂಬ ಭಾವನೆಯನ್ನು ಮೂಡಿಸಿದವರು ಎಂದರು.































 
 

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮಾತನಾಡಿ, ಬಹುತೇಕ ದೇಶಗಳಲ್ಲಿ ರಕ್ತ ಕ್ರಾಂತಿಯ ಮುಖಾಂತರ ಸ್ವಾತಂತ್ರ್ಯ ಪಡೆದ ಭಾರತದಲ್ಲಿ ಮಾತ್ರ ಮಹಾತ್ಮ ಗಾಂಧೀಜಿವರ ನೇತೃತ್ವದಲ್ಲಿ ಅಹಿಂಸಾತ್ಮಕ ರೀತಿಯಲ್ಲಿ ಸ್ವಾತಂತ್ರ್ಯ ಪಡೆಯಲಾಗಿದೆ. ಗಾಂಧೀಜಿಯವರ ಅಹಿಸ್ಮಾತ್ಮ ನೀತಿ ವಿಶ್ವದಲ್ಲೇ ಖ್ಯಾತಿ ಪಡೆದಿದೆ. ಮಹಾತ್ಮ ಗಾಂಧೀಜಿಯವರ ತತ್ವ, ಆದರ್ಶಗಳು ಇಂದಿನಿ ಪೀಳಿಗೆಗೆ ಆದರ್ಶವಾಗಿದ್ದು ಅವರ ಪುಸ್ತಕಗಳನ್ನು ಓದಿ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದರು.

ನಗರ ಠಾಣೆಯ ನಿರೀಕ್ಷಕ ಜಾನ್ಸನ್ ಡಿ’ ಸೋಜ, ಪುರಸಭಾ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ, ಕಾಂಗ್ರೆಸ್ ರಾಜ್ಯ ವಕ್ತಾರ ಅಮಳ ರಾಮಚಂದ್ರ ಸಂದರ್ಭೋಚಿತವಾಗಿ ಮಾತನಾಡಿದರು.

ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿ’ ಸೋಜ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಅಕ್ರಮ-ಸಕ್ರಮ ಸಮಿತಿ ಸದಸ್ಯೆ ರೂಪರೇಖಾ ಆಳ್ವ, ರಾಮಣ್ಣ ಪಿಳಿಂಜ,  ವೇದನಾಥ ಸುವರ್ಣ, ಸೀತಾರಾಮ ಶೆಟ್ಟಿ ಬನ್ನೂರು, ಮಹೇಶ್‌ಚಂದ್ರ ಸಾಲ್ಯಾನ್, ಸಯ್ಯದ್ ಕಮಲ್, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಶರೂನ್ ಸಿಕ್ಚೇರಾ, ವಿಶ್ವಜಿತ್ ಅಮ್ಮಂಜ, ರವಿಪ್ರಸಾದ್ ಶೆಟ್ಟಿ, ಲ್ಯಾನ್ಸಿ ಮಸ್ಕರೇನಸ್, ಮೌರೀಸ್ ಮಸ್ಕರೇನಸ್, ವಿಜಯಲಕ್ಷ್ಮಿ, ಅಶ್ಮಾಗಟ್ಟಮನೆ ಸೇರಿದಂತೆ ಹಲವು ಮಂದಿ ಪ್ರಮುಖರು ಹಾಗೂ ಇಲಾಖಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಗಾಂಧೀಕಟ್ಟೆ ಸಮಿತಿ ಸಂಚಾಲಕ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿ, ವಂದಿಸಿದರು. ಚಂದ್ರಪ್ರಭಾ ಗೌಡ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಸರ್ವಧರ್ಮ ದೀಪ ಬೆಳಗಿಸಿ, ರಾಮಕೃಷ್ಣ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಗಾಂಧೀ ಭಜನೆ, ಸರ್ವಧರ್ಮ ಪ್ರಾರ್ಥನೆ ನೆರವೇರಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top