ಮಂಗಳೂರು: ಮರವೂರು ಸಮೀಪ ಪಲ್ಗುಣಿ ನದಿಯಲ್ಲಿ ಈಜಲು ಹೋದ ಮಂಗಳೂರಿನ ಇಬ್ಬರು ಯುವಕರು ನೀರುಪಾಲಾದ ಘಟನೆ ಭಾನುವಾರ ಸಂಜೆ ಸಂಭವಿಸಿದೆ. ನಾಪತ್ತೆಯಾದ ಯುವಕರನ್ನು ಮಂಗಳೂರು ಕೊಟ್ಟಾರಚೌಕಿ ನಿವಾಸಿ ಸುಮಿತ್ (20) ಹಾಗೂ ಉರ್ವಸ್ಟೋರ್ ನಿವಾಸಿ ಅನೀಶ್ (19) ಎಂದು ಗುರುತಿಸಲಾಗಿದೆ.
ಮರವೂರು ವೆಂಟೆಡ್ ಡ್ಯಾಂನ ಪಕ್ಕದಲ್ಲಿರುವ ರೈಲ್ವೆ ಸೇತುವೆಯ ಬಳಿ ಪಲ್ಗುಣಿ ನದಿಯಲ್ಲಿ ಈಜಲು ನಾಲ್ವರು ಯುವಕರ ತಂಡ ಹೋಗಿದ್ದು, ಕೋಡಿಕಲ್ ನಿವಾಸಿಗಳಾದ ಅರುಣ್ ಹಾಗೂ ದೀಕ್ಷಿತ್ ಅಪಾಯವಿಲ್ಲದೆ ಬಚಾವಾಗಿದ್ದಾರೆ. ನಾಪತ್ತೆಯಾದವರ ಹುಡುಕಾಟಕ್ಕಾಗಿ ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರು ಆಗಮಿಸಿದ್ದು ಬಜಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಈಜಲು ಫಲ್ಗುಣಿ ನದಿಗಿಳಿದ ಇಬ್ಬರು ಯುವಕರು ಮುಳುಗಿ ಸಾವು
