ರಾಮ ಮಂದಿರ ಉದ್ಘಾಟನೆಯನ್ನು ನಾಚ್‌ ಗಾನ ಕಾರ್ಯಕ್ರಮ ಎಂದ ರಾಹುಲ್‌ ಗಾಂಧಿ

ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣಪ್ರತಿಷ್ಠೆ ಮತ್ತು ಲೋಕಾರ್ಪಣೆ ಸಮಾರಂಭವನ್ನು ನಾಚ್ ಗಾನ ಕಾರ್ಯಕ್ರಮ ಎಂದು ಕರೆದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮತ್ತೊಮ್ಮೆ ಹಿಂದುಗಳ ಧಾರ್ಮಿಕ ನಂಬಿಕೆಯನ್ನು ನೋಯಿಸಿದ್ದಾರೆ.
ಧಾರ್ಮಿಕ ಕಾರ್ಯಕ್ರಮವನ್ನು ನೃತ್ಯ-ಕುಣಿತದ ಕಾರ್ಯಕ್ರಮ ಎಂದು ಕರೆದ ರಾಹುಲ್‌ ಗಾಂಧಿ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಅಯೋಧ್ಯೆ ರಾಮಮಂದಿರ ಉದ್ಘಾಟನಾ ಸಮಾರಂಭ ನಾಚ್ ಗಾನ ಕಾರ್ಯಕ್ರಮವಾಗಿತ್ತು. ಕರೆಯಬೇಕಿದ್ದವರನ್ನು ಬಿಟ್ಟು ಅಮಿತಾಬ್ ಬಚ್ಚನ್, ಅದಾನಿ ಮತ್ತು ಅಂಬಾನಿಯಂತಹ ದೊಡ್ಡ ವ್ಯಕ್ತಿಗಳು ಹಾಗೂ ಹಣವಿದ್ದ ವ್ಯಕ್ತಿಗಳನ್ನು ಆಹ್ವಾನಿಸಲಾಗಿತ್ತು. ರಾಮ ಮಂದಿರ ಸಂಘಟಕರು ಕೆಳವರ್ಗದವರನ್ನು ಏಕೆ ಆಹ್ವಾನಿಸಿಲ್ಲ? ಅನೇಕ ಗಣ್ಯರನ್ನು ಆಹ್ವಾನಿಸಿದ್ದರೂ ಒಬ್ಬ ಕಾರ್ಮಿಕ, ರೈತನನ್ನು ಆಹ್ವಾನಿಸಿಲ್ಲ. ಇದರಿಂದಾಗಿ ಬಿಜೆಪಿ ಅಯೋಧ್ಯೆಯಲ್ಲಿ ಸೋತುಹೋಯಿತು ಎಂದು ರಾಹುಲ್ ಗಾಂಧಿ ಹರ್ಯಾಣ ಮತ್ತು ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಮಾತನಾಡಿ ವಿವಾದಕ್ಕೀಡಾಗಿದ್ದಾರೆ.

ರಾಹುಲ್‌ ಗಾಂಧಿ ಮೇಲೆ ಬಿಜೆಪಿಗರು ಮುಗಿಬಿದ್ದಿದ್ದು, ಕಾಂಗ್ರೆಸ್ ಪದೇಪದೆ ಹಿಂದೂಗಳನ್ನು ಅವಮಾನಿಸುತ್ತಿದೆ ಎಂದು ಹರಿಹಾಯ್ದಿದ್ದಾರೆ. ಬಿಜೆಪಿ ನಾಯಕ, ಆಂಧ್ರ ಪ್ರದೇಶ ಆರೋಗ್ಯ ಸಚಿವ ಸತ್ಯ ಕುಮಾರ್ ಯಾದವ್ ಈ ಕುರಿತು ಎಕ್ಸ್‌ನಲ್ಲಿ ಕಿಡಿಕಾರಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರದ ಅದ್ದೂರಿ ಉದ್ಘಾಟನೆಯನ್ನು ರಾಹುಲ್ ಗಾಂಧಿ ಕೇವಲ ‘ನೃತ್ಯ ಕಾರ್ಯಕ್ರಮ’ ಎಂದು ಉಲ್ಲೇಖಿಸಿ ಹಿಂದೂಗಳ ಮೇಲಿನ ದ್ವೇಷ ಎಷ್ಟಿದೆ ಎಂದು ತೋರಿಸಿದ್ದಾರೆ. ಈ ಪವಿತ್ರ ಕ್ಷಣಕ್ಕಾಗಿ ಅಸಂಖ್ಯಾತ ಹಿಂದೂಗಳು ತಮ್ಮ ರಕ್ತ ಚೆಲ್ಲಿ ತ್ಯಾಗ ಮಾಡಿದ್ದಾರೆ. ಅವರ ನೀಚ ಮಾತುಗಳು ಸಾವಿರಾರು ಹಿಂದೂಗಳ ಭಕ್ತಿ ಮತ್ತು ತ್ಯಾಗಕ್ಕೆ ಮಾಡಿದ ಘೋರ ಅಪಮಾನ ಎಂದು ಸತ್ಯ ಯಾದವ್ ಹೇಳಿದ್ದಾರೆ.































 
 

ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲ ಈ ಕುರಿತು ಮಾತನಾಡಿ, ರಾಹುಲ್‌ ಗಾಂಧಿ ಹೇಳಿಕೆ ಖಂಡನೀಯ ಎಂದಿದ್ದಾರೆ. ರಾಹುಲ್ ಗಾಂಧಿ ಬೇರೆ ಧರ್ಮದವರ ನಂಬಿಕೆ ಮತ್ತು ಪವಿತ್ರ ಕಾರ್ಯಕ್ರಮಗಳ ಬಗ್ಗೆ ಇದೇ ರೀತಿ ಟೀಕಿಸುತ್ತಾರಾ ಎಂದು ಪ್ರಶ್ನಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top