ಪುತ್ತೂರು: ಮುಂಡೂರು ಗ್ರಾಮದ ಕೆರೆಮನೆಕಟ್ಟೆ – ಕೇದಗಡಿ- ಮರ್ತಡ್ಕ -ನಡುಬೈಲು – ನಾಡಾಜೆಯಾಗಿ ಮುಂಡೂರು ಪಂಜಳ ಸಂಪರ್ಕ ರಸ್ತೆ ನಾದುರಸ್ತಿಯಲ್ಲಿದ್ದು, ವಾಹನ ಸವಾರರಿಗೆ ಸಂಕಷ್ಟ ಉಂಟಾಗಿದೆ.
ಈ ರಸ್ತೆ 50ಕ್ಕಿಂತ ಹೆಚ್ಚು ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಹಲವು ವಾಹನಗಳು ಸಂಚರಿಸುವುದರಿಂದ ಮಳೆಗಾಲ ಸಂದರ್ಭದಲ್ಲಿ ವಾಹನಗಳಲ್ಲದೆ ನಡೆದಾಡಲು ಕಷ್ಟಕರವಾಗಿದೆ. ಈ ವಿಷಯವಾಗಿ ಸ್ಥಳೀಯರಲ್ಲಿ ಚರ್ಚಿಸಿದಾಗ ಇದುವರೆಗೂ ಯಾರೂ ಈ ರಸ್ತೆಯ ಬಗ್ಗೆ ಪ್ರಶ್ನಿಸಿಯೆ ಇಲ್ಲ, ಪಂಚಾಯಿತಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಯಾವ ಅಧಿಕಾರಿಯಾದರೂ ಹಳ್ಳಿ ಸಮಸ್ಯೆಯ ಕಡೆ ಗಮನ ಹರಿಸುತ್ತಿಲ್ಲ.
ಇದೀಗ ಹೇಳೋರು-ಕೇಳೋರೆ ಇಲ್ಲ ಎಂಬಂತಾದ ರಸ್ತೆಯ ದುರವಸ್ಥೆ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.