ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನ ಹಾಸ್ಪಿಟಲ್ ಸಾಯನ್ಸ್ ವಿಭಾಗ ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ “ಕೋಂಟಿನೆಂಟಲ್ ಕ್ಯೂಸಿನ್” ಎಂಬ ಯುರೋಪ್ ಮಾದರಿಯ ಖಾದ್ಯ ವಿಷಯಾಧಾರಿತ ಪ್ರಾಯೋಗಿಕ ಕಾರ್ಯಗಾರ ನಡೆಸಿತು.
ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ಪ್ರಸಿದ್ಧ ಪಂಚ ತಾರಾ ನೋವೋಟಲ್ ಪಾಕತಜ್ಞಾ ಪ್ರಜ್ವಲ್ ಬಿ. ಕೆ. ಪ್ರಾಯೋಗಿಕ ತರಬೇತಿಯನ್ನು ನಡೆಸಿಕೊಟ್ಟರು. ಪಾಶ್ಚಿಮಾತ್ಯ ದೇಶಗಳಲ್ಲಿನ ವಿಶಿಷ್ಟ ಖಾದ್ಯಗಳನ್ನು ತಯಾರಿಸುವ ವಿಧಾನವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ, ವಿದೇಶಿ ರಾಷ್ಟ್ರಗಳಲ್ಲಿನ ಹಾಸ್ಪಿಟಲ್ ಸಾಯನ್ಸ್ ನ ಬೇಡಿಕೆ ಮತ್ತು ಉದ್ಯೋಗದ ವ್ಯಾಪ್ತಿಯನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ. ಎ. ಭಾಗವಹಿಸಿದರು. ಹಾಸ್ಪಿಟಲ್ ಸಾಯನ್ಸ್ ವಿಭಾಗದ ಮುಖ್ಯಸ್ಥ ರತ್ನಾಕರ ಪ್ರಭು ಮಾರ್ಗದರ್ಶನದಲ್ಲಿ ಕಾರ್ಯಾಗಾರ ಯಶಸ್ವಿಯಾಗಿ ಜರುಗಿತು. ಹಾಸ್ಪಿಟಲ್ ಸಾಯನ್ಸ್ ವಿಭಾಗದ ಸಹ ಪ್ರಾಧ್ಯಾಪಕಿ ಶ್ರುತ ಸಲಹೆ ನೀಡಿದರು. ಹಾಸ್ಪಿಟಲ್ ಸಾಯನ್ಸ್ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಥಮ ಬಿ ಎಚ್ ಎಸ್ ವಿದ್ಯಾರ್ಥಿ ಚೇತನ್ ಸ್ವಾಗತಿಸಿ, ನಿರೂಪಿಸಿದರು.