ಅಕ್ಷಯ ಕಾಲೇಜಿನಲ್ಲಿ  ‘ಬೈಟ್ ಬ್ಲಿಜ್ ಕ್ಲಬ್’ ನ ಉದ್ಘಾಟನೆ

ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಬಿ.ಸಿ.ಎ. ವಿಭಾಗ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ ಮಾಹಿತಿ ತಂತ್ರಜ್ಞಾನ ಸಂಘ ದ ಉದ್ಘಾಟನೆಯು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಬೆಂಗಳೂರು ಜ್ಯೋತಿ ಇನ್‍ ಸ್ಟಿಟ್ಯೂಟ್ ಆಫ್‍ ಟೆಕ್ನಾಲಜಿ ಕಂಪ್ಯೂಟರ್ ಮತ್ತು ಇಂಜಿನಿಯರಿಂಗ್‍ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಎ.ಎನ್. ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ನೂತನ ಲಾಂಛನ ಅನಾವರಣಗೊಳಿಸಿ ಮಾತನಾಡಿ, ನಮ್ಮ ದೇಶದ ಯಶಸ್ವಿ ಸಾಧಕರ ಜೀವನ ರಹಸ್ಯವನ್ನು ನಾವು ಅಧ್ಯಯನ ಮಾಡಿದರೆ ನಮ್ಮ ಪ್ರಯತ್ನದಲ್ಲಿ ಯಾವ ಅಂಶಗಳಿರಬೇಕು ಎಂಬುದು ಮುಖ್ಯ. ಈ ನಿಟ್ಟಿನಲ್ಲಿ ನಾವು ಆತ್ಮ ವಿಶ್ವಾಸ ಮತ್ತು ದೃಡ ಸಂಕಲ್ಪ ವನ್ನು ಹೊಂದಿದ್ದರೆ ನಮ್ಮ ಬೇಡಿಕೆಯ ಗುರಿಯನ್ನು ತಲುಪುವ ಹಾದಿಯನ್ನು ಸುಗಮಗೊಳಿಸಬಹುದು . ಶಿಸ್ತು ಮತ್ತು ಸಮಯ ಪ್ರಜ್ಞೆಯು ಸಂದರ್ಭಕ್ಕೆ ಸರಿಯಾಗಿ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ಮಾಡಲು ಸಹಕರಿಸುತ್ತದೆ . ಏಕಾಗ್ರತೆಯು ಮಾಡಲಿಚ್ಚಿಸುವ ಕೆಲಸ ಕಾರ್ಯಗಳನ್ನು ಶ್ರದ್ದೆಯಿಂದ ಮತ್ತು ಪರಿಪೂರ್ಣತೆ ತಲುಪಿಸುತ್ತದೆ ಹಾಗೂ ಕಠಿಣ ಪರಿಶ್ರಮವು ನಮ್ಮ ಯಶಸ್ವನ್ನು ಉತ್ತುಂಗಕ್ಕೆ ತಲುಪಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಯಶಸ್ವಿ ಜೀವನದ ರಹಸ್ಯ ಗಳನ್ನು ತಿಳಿಸಿದರು.

ಆಧುನಿಕ ಜೀವನದ ಹೆಚ್ಚುತ್ತಿರುವ ವೇಗ ಮತ್ತು ಬದಲಾವಣೆಯನ್ನು ನಿಭಾಯಿಸಲು, ವಿದ್ಯಾರ್ಥಿಗಳಿಗೆ ಒತ್ತಡ ಮತ್ತು ಹತಾಶೆಯನ್ನು ಎದುರಿಸುವ ಹೊಸ ಜೀವನ ಕೌಶಲ್ಯಗಳು ಬೇಕಾಗುತ್ತವೆ. ಹೊಸ ಆಲೋಚನೆ ಮತ್ತು ಸಮಸ್ಯೆಯನ್ನು ಪರಿಹರಿಸುವ ಮಾರ್ಗಗಳನ್ನು ಕಂಡುಕೊಂಡು ಜೀವನವನ್ನು ಯಶಸ್ವಿಗೊಳಿಸುವ ಸಾಮರ್ಥ್ಯ ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ತಮ್ಮ ಅನುಭವದೊಂದಿಗೆ ವಿವರಿಸಿದರು.































 
 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲ್, ಮಾಹಿತಿ ತಂತ್ರಜ್ಞಾನ ಸಂಘ ಕ್ಕೆ “ ಬೈಟ್ ಬ್ಲಿಜ್ ಕ್ಲಬ್” ಎಂಬುದಾಗಿರುವ ನೂತನ ಹೆಸರನ್ನು ಅನಾವರಣಗೊಳಿಸಿ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾಹಿತಿ ಮತ್ತು ತಂತ್ರಜ್ಞಾನ ಯುಗದಲ್ಲಿ ಹೊಸ ಆವಿಷ್ಕಾರಗಳ ಬಗ್ಗೆ ಶೀಘ್ರ ಮಾಹಿತಿ ಪಡೆಯುವುದು, ಸ್ಪರ್ಧಾತ್ಮಕವಾಗಿ ಯುಗದಲ್ಲಿ ನಮ್ಮ ತಿಳುವಳಿಕೆಯನ್ನು ನವೀಕರಿಸಿಸುತ್ತಿರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top