ಪುತ್ತೂರು: ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯ ಆಡಳಿತ ಮಂಡಳಿಯ ಆಡಳಿತ ನಿರ್ದೇಶಕರಾಗಿ ಮುರಳೀಧರ ಕೆ.ಎಲ್. ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮೋಕ್ಷಿತಾಮಿಥುನ್ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಪ್ರವೀಣ್ ಕುಂಟ್ಯಾನ, ವಸಂತ ವೀರಮಂಗಲ, . ಹಾಗೂ ನಾಗೇಶ್ ಕೆಡೆಂಜಿ, ಆಯ್ಕೆಯಾಗಿದ್ದಾರೆ.
ಈ ಹಿಂದೆ ಸಂಸ್ಥೆಯ ಆಡಳಿತ ನಿರ್ದೇಶಕರಾಗಿ ಪ್ರವೀಣ್ ಕುಂಟ್ಯಾನ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನಾಗೇಶ್ ಕೆಡೆಂಜಿ ಕಾರ್ಯನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಸಂಸ್ಥೆ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದ್ದು, ಸಂಸ್ಥೆಯಲ್ಲಿ ಐಎಎಸ್, ಐಎಫ್ ಎಸ್, ಐಪಿಎಸ್, ಸಿಎ, ಸಿಎಂಎ, ನೀಟ್, ಕೆಸಿಇಟಿ, ಪ್ಲೇಸ್ ಮೆಂಟ್ ತರಬೇತಿ, ಎಜ್ಯುಕೇಶನ್ ಗೈಡ್ ಲೈನ್ಸ್, ಪಿಯುಸಿ ಟ್ಯೂಷನ್, ಡಿಸ್ಟೆನ್ಸ್ ಎಜ್ಯುಕೇಶನ್, ಲರ್ನಿಂಗ್ ಒರ್ಟರಿ ಸ್ಕಿಲ್ಸ್, ಸ್ಪೋಕನ್ ಇಂಗ್ಲೀಷ್, ಆ್ಯಂಕರಿಂಗ್, ಉನ್ನತ ಶಿಕ್ಷಣದ ಮಾಹಿತಿ, ಡಿಗ್ರಿ, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳ ಮಾಹಿತಿ, ಸರಕಾರಿ ವಸತಿ ನಿಲಯದ ಮಾಹಿತಿ, ಸರಕಾರಿ ವಿದ್ಯಾರ್ಥಿ ವೇತನ ಮಾಹಿತಿ, ಪ್ರೇರಣಾ ಸಂಸ್ಥೆಯಿಂದ ಉನ್ನತ ಶಿಕ್ಷಣದ ಮಾಹಿತಿ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಶೈಕ್ಷಣಿಕ ಸಾಲದ ಕುರಿತು ಮಾಹಿತಿ, ಸರಕಾರಿ, ಖಾಸಗಿ ಉದ್ಯೋಗದ ಮಾಹಿತಿ ನೀಡಲಾಗುತ್ತದೆ.
ಸಂಸ್ಥೆಯಲ್ಲಿ ಇದುವರೆಗೆ 20 ಸಾವಿರ ಮಕ್ಕಳಿಗೆ ಉನ್ನತ ಶಿಕ್ಷಣ ಮಾಹಿತಿ ನೀಡಲಾಗಿದೆ. ಸಂಸ್ಥೆಯಿಂದ ಕಳೆದ ವರ್ಷ ಅರ್ಹ ವಿದ್ಯಾರ್ಥಿಗಳಿಗೆ 2 ಲಕ್ಷ ವಿದ್ಯಾರ್ಥಿ ವೇತನ ಹಾಗೂ ಈ ವರ್ಷ ಅರ್ಹ ವಿದ್ಯಾರ್ಥಿಗಳಿಗೆ 3 ಲಕ್ಷ ವಿದ್ಯಾರ್ಥಿವೇತನ ನೀಡಲಾಗಿದೆ.
ಆಡಳಿತ ಮಂಡಳಿ ಸಭೆಯಲ್ಲಿ ಕಛೇರಿ ಪ್ರಬಂಧಕರಾದ ದಯಾಮಣಿ ಎಚ್.ಕೆ. ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.