ಕೆಎಸ್‌ಆರ್‌ಟಿಸಿಯಿಂದ ದಸರಾ ಟೂರ್‌ ಪ್ಯಾಕೇಜ್‌

ಮಂಗಳೂರಿನಿಂದ ದೇವಸ್ಥಾನಗಳ ದರ್ಶನಕ್ಕೆ ನಿತ್ಯ ಬಸ್‌ಗಳು

ಮಂಗಳೂರು: ಈ ವರ್ಷವೂ ಕೆಎಸ್‌ಆರ್‌ಟಿಸಿ ದಸರಾ ಹಬ್ಬದ ಪ್ರಯುಕ್ತ ವಿಶೇಷ ಟೂರ್‌ ಪ್ಯಾಕೇಜ್‌ ಆಯೋಜಿಸಿದೆ. ಮಂಗಳೂರು ವಿಭಾಗದಿಂದ ಮಂಗಳೂರು ಸುತ್ತಮುತ್ತಲಿನ ದೇವಸ್ಥಾನಗಳ ದರ್ಶನಕ್ಕೆ ಹಾಗೂ ಮಂಗಳೂರು-ಮಡಿಕೇರಿ, ಮಂಗಳೂರು-ಕೊಲ್ಲೂರು, ಮಂಗಳೂರು-ಮುರುಡೇಶ್ವರಕ್ಕೆ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಅ.3ರಿಂದ 12ರವರೆಗೆ ಯೋಜಿಸಲಾಗಿದೆ.

ಮಂಗಳೂರು ಟೂರ್‌ ಪ್ಯಾಕೇಜ್‌































 
 

ಮಂಗಳೂರು ಬಸ್ಸು ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಹೊರಟು, ಶ್ರೀ ಮಂಗಳಾದೇವಿ ದೇವಸ್ಥಾನ, ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ, ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ (ಮಧ್ಯಾಹ್ನದ ಊಟ), ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ, ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಉರ್ವ ಮಾರಿಯಮ್ಮ ದೇವಸ್ಥಾನ (ಸಂಜೆ ಉಪಹಾರ), ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಗಳಿಗೆ ಹೋಗಿ ನವದುರ್ಗಾ ದರ್ಶನ ರಾತ್ರಿ 8 ಗಂಟೆಗೆ ಮಂಗಳೂರು ಬಸ್ ನಿಲ್ದಾಣಕ್ಕೆ ಹಿಂತಿರುಗಲಾಗುತ್ತದೆ.
ಪ್ರಯಾಣದರ ವಯಸ್ಕರಿಗೆ 400 ರೂ., ಮಕ್ಕಳಿಗೆ (6 ವರ್ಷದಿಂದ 12 ವರ್ಷದವರಿಗೆ) 300 ರೂ. ನಿಗದಿಪಡಿಸಲಾಗಿದೆ.

ಮಡಿಕೇರಿ ಪ್ಯಾಕೇಜ್‌

ಮಂಗಳೂರಿನಿಂದ ಬೆಳಗ್ಗೆ 7 ಗಂಟೆಗೆ ಹೊರಟು ಮಡಿಕೇರಿ, ರಾಜಾಸೀಟ್‌, ಅಬ್ಬಿಫಾಲ್ಸ್, ನಿಸರ್ಗಧಾಮ, ಗೋಲ್ಡನ್‌ ಟೆಂಪಲ್ ಪ್ರವಾಸ ಕೈಗೊಂಡು ರಾತ್ರಿ 9 ಗಂಟೆಗೆ ಮಂಗಳೂರು ಬಸ್ ನಿಲ್ದಾಣಕ್ಕೆ ಹಿಂತಿರುಗಲಾಗುತ್ತದೆ. ವಯಸ್ಕರಿಗೆ 500 ರೂ. ಮಕ್ಕಳಿಗೆ 16 ವರ್ಷದಿಂದ 12 ವರ್ಷದವರಿಗೆ) 400 ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ.

ಕೊಲ್ಲೂರು ಪ್ಯಾಕೇಜ್‌

ಮಂಗಳೂರು ಬಸ್ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಹೊರಟು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ (ಮಧ್ಯಾಹ್ನದ ಊಟ), ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಪ್ರವಾಸ ಕೈಗೊಂಡು ರಾತ್ರಿ 7 ಗಂಟೆಗೆ ಮಂಗಳೂರು ಬಸ್ ನಿಲ್ದಾಣಕ್ಕೆ ಹಿಂತಿರುಗಲಾಗುತ್ತದೆ. ವಯಸ್ಕರಿಗೆ 500 ರೂ. ಮತು ಮಕ್ಕಳಿಗೆ (6- 12 ವರ್ಷದವರಿಗೆ) 400 ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ.

ಮುರುಡೇಶ್ವರ ಪ್ಯಾಕೇಜ್‌

ಮಂಗಳೂರು ಬಸ್ ನಿಲ್ದಾಣದಿಂದ ಬೆಳಗ್ಗೆ 7 ಗಂಟೆಗೆ ಹೊರಟು ಮುರುಡೇಶ್ವರ ದೇವಸ್ಥಾನ, ಚಂಡಿಕಾ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ, ಕುಂಭಾಶಿ ಆನೆಗುಡ್ಡೆ ಗಣಪತಿ ದೇವಸ್ಥಾನ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಪ್ರವಾಸ ಕೈಗೊಂಡು ರಾತ್ರಿ 7 ಗಂಟೆಗೆ ಮಂಗಳೂರು ಬಸ್ ನಿಲ್ದಾಣಕ್ಕೆ ಹಿಂತಿರುಗಲಾಗುತ್ತದೆ ವಯಸ್ಕರಿಗೆ 550 ರೂ. ಮಕ್ಕಳಿಗೆ (6-12 ವರ್ಷದವರಿಗೆ) 450 ರೂ. ಪ್ರಯಾಣದರ ನಿಗದಿಪಡಿಸಲಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಸೀಟ್‌ ಕಾಯ್ದಿರಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ಮಾಹಿತಿಗಾಗಿ: 7760990702, 7760990711, ಮಂಗಳೂರು-1ನೇ ಘಟಕ ವ್ಯವಸ್ಥಾಪಕರು, ದೂರವಾಣಿ ಸಂಖ್ಯೆ 7760990713, ಮಂಗಳೂರು-3ನೇ ಘಟಕ ವ್ಯವಸ್ಥಾವಕರು ದೂರವಾಣಿ ಸಂಖ್ಯೆ 7760990723, ಮಂಗಳೂರು ಮುಂಗಡ ಬುಕ್ಕಿಂಗ್‌ ಕೌಂಟರ್ ದೂರವಾಣಿ ಸಂಖ್ಯೆ 9063211553, ಮಂಗಳೂರು ಬಸ್ ನಿಲ್ದಾಣ ದೂರವಾಣಿ ಸಂಖ್ಯೆ: 7760990720 ಸಂಪರ್ಕಿಸುವಂತೆ ಕೆಎಸ್‌ಆರ್‌ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top