ಪುತ್ತೂರು: ಅಕ್ಷಯ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾಯೋಜನಾ ದಿನಾಚರಣೆಯನ್ನು ಎನ್ .ಎಸ್ . ಎಸ್ ಘಟಕಗಳ ನೇತೃತ್ವದಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಸಹಭಾಗಿತ್ವದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು.

ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ, ಎನ್ ಎನ್ ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಹರಿಪ್ರಸಾದ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯವ್ಯಾಪ್ತಿಯಲ್ಲಿ ಪ್ರಸ್ತುತ ವ್ಯಕ್ತಿತ್ವ ವಿಕಸನಕ್ಕೆ ಒತ್ತುನೀಡಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಂತಹ ಕೆಲಸಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ನಾಯಕತ್ವ ಗುಣಬೆಳೆಸಿ ಸಾಮಾಜಿಕ ಪ್ರತಿಬದ್ಧತೆಯನ್ನು ಕಾಪಾಡಲು ಪ್ರೇರೇಪಿಸುತ್ತದೆ ಎಂದು ಹೇಳಿದರು. ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಪುರಸ್ಕಾರ, ಅತ್ಯುತ್ತಮ ಸ್ವಯಂ ಸೇವಕ ಮತ್ತು ಸ್ವಯಂ ಸೇವಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 2021- 23 ರ ಸಾಲಿನ ಅತ್ಯುತ್ತಮ ಸ್ವಯಂ ಸೇವಕ ಪ್ರಶಸ್ತಿಯನ್ನು ರೋಹಿತ್ ಮತ್ತು ಅತ್ಯುತ್ತಮ ಸ್ವಯಂ ಸೇವಕಿ ಪ್ರಶಸ್ತಿಯನ್ನು ವಿದ್ಯಾಶ್ರೀ ಪಡೆದರು. 2022- 23 ರ ಸಾಲಿನ ಅತ್ಯುತ್ತಮ ಸ್ವಯಂ ಸೇವಕ ಪ್ರಶಸ್ತಿಯನ್ನು ಕೀರ್ತನ್, ಅತ್ಯುತ್ತಮ ಸ್ವಯಂ ಸೇವಕಿ ದೀಕ್ಷಾ ಪಡೆದರು . 2023- 24 ಸಾಲಿನ ವಿಶೇಷ ವಾರ್ಷಿಕ ಶಿಬಿರದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.

ಮುಖ್ಯ ಅತಿಥಿಯಾಗಿ ಕಾಲೇಜಿನ ಹಳೆ ವಿದ್ಯಾರ್ಥಿನಿ ಪ್ರಣಮ್ಯ ಸಿ.ಎ., ಹಿರಿಯಸ್ವಯಂಸೇವಕಿ, ಅಂತರರಾಷ್ಟ್ರೀಯ ಯೋಗಪಟು ಮತ್ತು ವಿಶ್ವ ವಿದ್ಯಾನಿಲಯದ ಪ್ರಥಮ ರ‍್ಯಾಂಕ್ ವಿಜೇತೆ ಭಾಗವಹಿಸಿ ತಮ್ಮ ಅನುಭವವನ್ನು ಹಂಚಿಕೊಂಡರು.
ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳ ಅಧ್ಯಕ್ಷತೆ ವಹಿಸಿ, ರಾಷ್ಟ್ರೀಯ ಸೇವಾ ಯೋಜನೆಯು ವ್ಯಕ್ತಿಯ ಪರಿಪೂರ್ಣ ಬದುಕಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸುತ್ತದೆ. ಅದೆಷ್ಟೋ ವಿಷಯಗಳನ್ನು ನಾವು ನಮಗೆ ಅರಿವಿಲ್ಲದೆ ನಿರಂತರವಾಗಿ ಕಲಿಯುತ್ತೇವೆ. ಯೋಜನೆಯು ಬದುಕಿಗೆ ಒಂದು ಉತ್ತಮ ಪಾಠ ಕಲಿಸುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಆಡಳಿತಾಧಿಕಾರಿ ಅರ್ಪಿತ್ ಎ. ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ರಾಷ್ಟ್ರವ್ಯಾಪ್ತಿ ಒಂದು ಯೋಜನಾಬದ್ಧ ಸಂಘಟನೆಯಾಗಿದ್ದು, ಸಾಮಾಜಿಕ ಕಳಕಳಿಗೆ ಸ್ಪಂದಿಸಿ ವ್ಯಕ್ತಿ ವಿಕಸನದೊಂದಿಗೆ ಸಾಮಾಜಿಕ ಪರಿವರ್ತನೆಗೆ ಪಣತೊಟ್ಟ ಯುವ ಸಮೂಹವಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಸೇವಾಯೋಜನೆಯ ಘಟಕ 2 ರ ಕಾರ್ಯಕ್ರಮಮಾಧಿಕಾರಿ ಮೇಘಶ್ರೀ ವೇದಿಕೆಯಲ್ಲಿಉಪಸ್ಥಿತರಿದ್ದರು. ಪ್ರಕೃತಿ ಪ್ರಾರ್ಥಿಸಿದರು.
ಉದ್ಘಾಟಕರಕಿರುಪರಿಚಯವನ್ನುಘಟಕ1 ರನಾಯಕಿ ವರ್ಷಿಣಿ ಉದ್ಗಾಟಕರ ಪರಿಚಯ ಮಾಡಿದರು. ಪ್ರಣಮ್ಯ ಸಿ.ಎ. ಅವರ ಕಿರುಪರಿಚಯವನ್ನು ರಾಕೇಶ್ ಮಾಡಿದರು. ಶ್ರುತಿ ಸ್ವಾಗತಿಸಿ, ಅಖಿಲೇಶ್ ವಂದಿಸಿದರು. ಎನ್ ಎಸ್ ಎಸ್ ಸ್ವಯಂ ಸೇವಕಿ ವಿಂಧುಶ್ರೀ ಕಾರ್ಯಕ್ರಮ ನಿರೂಪಿಸಿದರು.