ಮನೆಗೆ ನುಗ್ಗಿ ನಗ-ನಗದು ಅಪಹರಣ : ಪ್ರಕರಣ ದಾಖಲು

ಬೆಳ್ತಂಗಡಿ: ಮನೆಯೊಂದಕ್ಕೆ ನುಗ್ಗಿದ ಕಳ್ಳರು ನಗ-ನಗದು ಕಳವುಗೈದ ಘಟನೆ ಬೆಳ್ತಂಗಡಿ ನಗರದ ಹಳೆಕೋಟೆ ಎಂಬಲ್ಲಿ ನಡೆದಿದೆ.

ಒಳನುಗ್ಗಿದ ಕಳ್ಳರು ಮನೆಯಿಂದ ಸುಮಾರು ಐದು ಲಕ್ಷ  ರೂ.ಮೌಲ್ಯದ ಚಿನ್ನಾಭರಣ ಹಾಗೂ ಐದು ಲಕ್ಷ ರೂ. ನಗದನ್ನು ಅಪಹರಿಸಿದ್ದಾರೆ.

ಪ್ರಸನ್ನ ಕುಮಾರ್ ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಇದೇ ಮನೆಯ ಹಾಲ್ ನಲ್ಲಿ ಟಿ.ವಿ.ಸ್ಟ್ಯಾಂಡ್ ಮೇಲೆ ಇಟ್ಟಿದ್ದ 5,05,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಹಾಗೂ ಐದು ಲಕ್ಷ ರೂ. ನಗದನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದ್ದು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top