ಮೊದಲ ಟೆಸ್ಟ್‌ : ಭಾರತಕ್ಕೆ 280 ರನ್‌ಗಳ ಭರ್ಜರಿ ಗೆಲುವು

ಅಶ್ವಿನ್‌ ಸ್ಪಿನ್‌ ಮೋಡಿಗೆ ಮಕಾಡೆ ಮಲಗಿದ ಬಾಂಗ್ಲಾ ಹುಲಿಗಳು

ಚೆನ್ನೈ: ಸ್ಪಿನ್‌ ಮಾಂತ್ರಿಕ ರವಿಚಂದ್ರನ್‌ ಅಶ್ವಿನ್‌ ಅವರ ಆಲ್‌ರೌಂಡರ್‌ ಪ್ರದರ್ಶನದಿಂದಾಗ ಬಾಂಗ್ಲಾದೇಶ ವಿರುದ್ಧ ಆಡಿದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ 280 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಚೆನ್ನೈಯ ಚಿಪಾಕ್‌ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ದಿನದಾಟದಲ್ಲಿ ಕಠಿಣ ಗುರಿ ಬೆನ್ನಟ್ಟಿದ ಬಾಂಗ್ಲಾ, ಭಾರತದ ಸ್ಪಿನ್‌ ಮಾಂತ್ರಿಕರ ದಾಳಿಗೆ ಮಕಾಡೆ ಮಲಗಿತು. 158 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದ ಬಾಂಗ್ಲಾದೇಶ ತಂಡ 357 ರನ್‌ಗಳ ಹಿನ್ನಡೆಯೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿತು. 200 ರನ್‌ ದಾಟುತ್ತಿದ್ದಂತೆ ಪೆವಿಲಿಯನ್‌ ಪರೇಡ್‌ ನಡೆಸಿತು. ಪರಿಣಾಮ 234 ರನ್‌ಗಳಿಗೆ ಬಾಂಗ್ಲಾ ಸರ್ವಪತನ ಕಂಡಿತು.

ಬಾಂಗ್ಲಾ ಪರ 5ನೇ ವಿಕೆಟ್‌ಗೆ ಶಕೀಬ್‌ ಮತ್ತು ನಾಯಕ ನಜ್ಮುಲ್‌ ಹೊಸೈನ್‌ ಸ್ಯಾಂಟೊ ತಾಳ್ಮೆಯ ಇನ್ನಿಂಗ್ಸ್‌ ಕಟ್ಟಿದ್ದರು. 108 ಎಸೆತಗಳಲ್ಲಿ ಈ ಜೋಡಿ 48 ರನ್‌ ಗಳಿಸಿತ್ತು. ಶಕೀಬ್‌ ಔಟಾಗುತ್ತಿದ್ದಂತೆ ಬಾಂಗ್ಲಾ ಆಟಗಾರರು ಪೆವಿಲಿಯನ್‌ ಪರೇಡ್‌ ನಡೆಸಲು ಶುರು ಮಾಡಿದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ ಪರ‌ ಸ್ಯಾಂಟೋ 82 ರನ್‌, ಜಾಕಿರ್‌ ಹಸನ್‌ 33 ರನ್‌, ಶದಾಮನ್‌ ಇಸ್ಲಾಮ್‌ 35 ರನ್‌, ಮಮಿನ್ಮುಲ್‌ ಹಾಕಿ ಹಾಗೂ ರಹೀಂ ತಲಾ 13 ರನ್‌ ಗಳಿಸಿದ್ರೆ, ಶಕೀಬ್‌ 25 ರನ್‌ ಗಳಿಸಿದರು. ಉಳಿದ ಆಟಗಾರರು ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರದ ಕಾರಣ ಭಾರತದ ಎದುರು ಮಂಡಿಯೂರಬೇಕಾಯಿತು.































 
 

ಭಾರತ 287ಕ್ಕೆ ಡಿಕ್ಲೆರ್

ಭಾರತ ತಂಡ 287/4 ಸ್ಕೋರ್‌ಗೆ ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಮೊದಲ ಇನಿಂಗ್ಸ್‌ನಲ್ಲಿ 227 ರನ್‌ಗಳ ಮುನ್ನಡೆ ಸೇರಿದಂತೆ ಬಾಂಗ್ಲಾದೇಶಕ್ಕೆ ಭಾರತ 515 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಪಂತ್ ಜೊತೆಗೆ ಶುಭಮನ್ ಗಿಲ್ (ಔಟಾಗದೆ 119- 176 ಎಸೆತ, 10 ಬೌಂಡರಿ, 4 ಸಿಕ್ಸರ್‌ ಸಿಡಿಸಿ ಶತಕ ಗಳಿಸಿದರು. ಕೆಎಲ್ ರಾಹುಲ್ (ಔಟಾಗದೆ 22; 19 ಎಸೆತ, 4 ಬೌಂಡರಿ) ಅಜೇಯರಾಗಿ ಉಳಿದರು.

ಭಾರತ ಪ್ರಥಮ ಇನಿಂಗ್ಸ್‌ನಲ್ಲಿ 376 ರನ್

ಬಾಂಗ್ಲಾದೇಶ ಬೌಲರ್‌ಗಳಲ್ಲಿ ಮೆಹದಿ ಹಸನ್ ಮಿರಾಜ್ ತಲಾ ಎರಡು, ಟಾಸ್ಕಿನ್ ಅಹ್ಮದ್ ಮತ್ತು ನಹಿದ್ ತಲಾ ಒಂದೊಂದು ವಿಕೆಟ್ ಪಡೆದರು. ಇದರ ನಡುವೆ ಭಾರತ ಮೊದಲ ಇನಿಂಗ್ಸ್‌ನಲ್ಲಿ 376 ರನ್‌ಗಳ ಬೃಹತ್ ಸ್ಕೋರ್ ಮಾಡಿತು. ರವಿಚಂದ್ರನ್ ಅಶ್ವಿನ್ (113) ಮತ್ತು ರವೀಂದ್ರ ಜಡೇಜಾ (86) ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ಹಸನ್ ಮಹ್ಮೂದ್ (5/83) ಐದು ವಿಕೆಟ್ ಪಡೆದಿದ್ದರು.

ಬಾಂಗ್ಲಾ 149ಕ್ಕೆ ಆಲ್‌ಔಟ್

ಜಸ್‌ಪ್ರೀತ್ ಬುಮ್ರಾ (4/50), ಆಕಾಶ ದೀಪ್ (2/19), ರವೀಂದ್ರ ಜಡೇಜಾ (2/19) ಮತ್ತು ಮೊಹಮ್ಮದ್ ಸಿರಾಜ್ (2/30) ನೆರವಿನಿಂದ ಭಾರತ ತಂಡ, ಪ್ರಥಮ ಇನಿಂಗ್ಸ್‌ನಲ್ಲಿ ಬಾಂಗ್ಲಾದೇಶವನ್ನು 149 ರನ್‌ಗಳಿಗೆ ಆಲ್‌ಔಟ್ ಮಾಡಿತ್ತು. ಶಕಿಬ್ ಅಲ್ ಹಸನ್ (32) ಗರಿಷ್ಠ ಸ್ಕೋರರ್ ಆಗಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top