ಪುತ್ತೂರು: ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಫೆಸೇರ ಫ್ಯಾಷನ್ ಅಸೋಸಿಯೇಶನ್ ಆಂತರಿಕ ಗುಣಮಟ್ಟದ ಭರವಸೆ ಕೋಶದ ಸಹಭಾಗಿತ್ವದಲ್ಲಿ ಸುಸ್ಥಿರತೆ – ಫ್ಯಾಷನ್ ಭವಿಷ್ಯ ಎಂಬ ಶೀರ್ಷಿಕೆಯಡಿ ಫ್ಯಾಷನ್ ಡಿಸೈನ್ ವಿಭಾಗದಿಂದ ಕಾರ್ಯಾಗಾರ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಪ್ರತಿಷ್ಠಿತ ಲಿಲ್ ಒಹಾನ ಸಂಸ್ಥೆಯ ಸ್ಥಾಪಕಿ, ಪ್ರಾಧ್ಯಾಪಕಿ ಅಲ್ಕಾ ಮನೋಜ್ ತಮ್ಮದೇ ಬ್ರ್ಯಾಂಡ್ “ಓಹನಾ” ದ ಬಗ್ಗೆ ವಿಸೃತ ಮಾಹಿತಿನೀಡಿ, ಪರಿಸರ ಸ್ನೇಹಿ ಬಟ್ಟೆ ಬರೆಗಳ ಬಳಕೆ ಮತ್ತು ಉತ್ಪಾದನೆಯನ್ನು ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ನಾವು ಪ್ರೋತ್ಸಾಹಿಸಬೇಕು. ನಾವು ಬಳಸುವ ವೈವಿಧ್ಯಮಯ ಉಡುಪುಗಳಲ್ಲಿ ಕೆಲವೊಂದು ಉಪಯೋಗ ಶೂನ್ಯವಾದ ಮೇಲೆ ನಮ್ಮ ಪರಿಸರದಲ್ಲಿ ವಿಲೇವಾರಿ ಮಾಡುತ್ತೇವೆ. ಆದರೆ ಅದು ಮಣ್ಣಿನೊಂದಿಗೆ ವಿಲೀನಗೊಳ್ಳುವ ಪ್ರಕ್ರಿಯೆಯಲ್ಲಿ ಪರಿಸರಕ್ಕೆ ಹಾನಿಯನ್ನು ಉಂಟುಮಾಡುತ್ತದೆ. ವಿವಿಧ ಕಾಲಘಟ್ಟದಲ್ಲಿ ಬಟ್ಟೆ ಬರೆಗಳ ಉತ್ಪಾದನಾ ರೀತಿ ಅವುಗಳ ಬಳಕೆ ಮತ್ತು ಉಪಯೋಗ ಶೂನ್ಯ ವಸ್ತ್ರಗಳ ಅಸಮರ್ಪಕ ವಿಲೇವಾರಿಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.
ತೃತೀಯ ಪದವಿ ಫ್ಯಾಷನ್ ಡಿಸೈನ್ ವಿಭಾಗದ ವಿದ್ಯಾರ್ಥಿನಿಯರಾದ ದೀಕ್ಷಾ ಸ್ವಾಗತಿಸಿ, ಧನ್ಯಶ್ರೀ ಸಂಪನ್ಮೂಲ ವ್ಯಕ್ತಿಯ ಕಿರುಪರಿಚಯ ಮಾಡಿದರು. ಸುಮಾರು 120 ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು. ಫ್ಯಾಷನ್ ಡಿಸೈನ್ ವಿಭಾಗದ ಮುಖ್ಯಸ್ಥೆ ಅನುಷಾ ಪ್ರವೀಣ್ ಕುಮಾರ್, ಫೆಸೇರ ಅಸೋಸಿಯೇಷನ್ ಸಂಯೋಜಕ, ಸಹ ಪ್ರಾಧ್ಯಾಪಕ ಕಿಶನ್ಎನ್. ರಾವ್, ಸಹ ಪ್ರಾಧ್ಯಾಪಕಿಯರಾದ ಜನೀತ, ಅನನ್ಯ ಭಟ್, ಧನ್ಯಶ್ರೀ ಉಪಸ್ಥಿತರಿದ್ದರು.