ಸೆ.21-30 : ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ RDC-II ಮತ್ತು CATC ಶಿಬಿರ

ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 19 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಮಡಿಕೇರಿ ಆಶ್ರಯದಲ್ಲಿ RDC-II ಮತ್ತು CATC ಶಿಬಿರ ಸೆ.21 ರಿಂದ 30 ರ ವರೆಗೆ ನಡೆಯಲಿದೆ. ಮಂಗಳೂರು, ಉಡುಪಿ, ಕೊಡಗು, ಶಿವಮೊಗ್ಗ ಜಿಲ್ಲೆಯ 600 ಎನ್ ಸಿ ಸಿ ಕೆಡೆಟ್ ಗಳು  ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

ಶಿಬಿರದಲ್ಲಿ ದೆಹಲಿಯ ಗಣರಾಜ್ಯೋತ್ಸವ ಪೆರೇಡ್ ನಲ್ಲಿ  ಭಾಗವಹಿಸುವ ಕೆಡೆಟ್ ಗಳ ಎರಡನೇ ಹಂತದ ಆಯ್ಕೆ ಶಿಬಿರ ಮತ್ತು ಕಂಬೈನ್ಡ್ ಆನ್ವಲ್  ಟ್ರೈನಿಂಗ್ ಕ್ಯಾಂಪ್ ಎಂಬ ಎರಡು ಶಿಬಿರಗಳು ನಡೆಯಲಿವೆ.

ಗಣರಾಜ್ಯೋತ್ಸವ ಪೆರೇಡಿಗೆ ಒಟ್ಟು 7 ಆಯ್ಕೆ ಶಿಬಿರಗಳು ನಡೆಯಲಿದ್ದು, ಅದರ ಎರಡನೇ ಹಂತದ ಶಿಬಿರ ಇದಾಗಿದ್ದು,  ಈಗಾಗಲೇ ಶಿವಮೊಗ್ಗದಲ್ಲಿ  ನಡೆದ ಮೊದಲ ಹಂತದ ಶಿಬಿರದಲ್ಲಿ ಆಯ್ಕೆಯಾದ 200 ಕೆಡೆಟ್ ಗಳು ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಕಂಬೈನ್ಡ್ ಆನ್ವಲ್  ಟ್ರೈನಿಂಗ್ ಕ್ಯಾಂಪ್ ನಲ್ಲಿ 400 ಕೆಡೆಟ್ ಗಳು ಭಾಗವಹಿಸಲಿದ್ದು ಒಟ್ಟು 600 ಎನ್ ಸಿ ಸಿ ಕೆಡೆಟ್ ಗಳು ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.  ಈ ಶಿಬಿರದ ಸಂಪೂರ್ಣ ನೇತೃತ್ವವನ್ನು  ಲೆಫ್ಟಿನೆಂಟ್ ಕರ್ನಲ್ ರೆಜಿತ್ ಮುಕುಂದನ್ ವಹಿಸಲಿದ್ದು,  ವಿವಿಧ ಬೆಟಾಲಿಯನ್ ನ ಅಧಿಕಾರಿಗಳು, ವಿವಿಧ ಕಾಲೇಜಿನ ಅಸೋಸಿಯೇಟ್  ಎನ್ ಸಿಸಿ ಅಧಿಕಾರಿಗಳು  ಭಾಗವಹಿಸಲಿದ್ದಾರೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದ ಮತ್ತು ಆಡಳಿತ ಮಂಡಳಿಯವರ ಮಾರ್ಗದರ್ಶನದಲ್ಲಿ, ಕಾಲೇಜಿನ ಎನ್ ಸಿ ಸಿ ಅಧಿಕಾರಿ ಲೆಫ್ಟಿನೆಂಟ್ ಸೀತಾರಾಮ ಎಂ. ಡಿ ಯವರು ಶಿಬಿರದ ಜವಾಬ್ದಾರಿಯನ್ನು ವಹಿಸಿಕೊಂಡಿರುತ್ತಾರೆ.  ಶಿಬಿರದ ಅಧಿಕೃತ ಉದ್ಘಾಟನೆಯು ಸೆಪ್ಟೆಂಬರ್ 22 ರಂದು ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top