ಪುತ್ತೂರು: 10 ಕುಟುಂಬ 18 ಗೋತ್ರದ ಗೌಡ ಸಮುದಾಯದ ಜನರನ್ನು ಒಗ್ಗೂಡಿಸುವುದು ಸಹಿತ ಹಲವಾರು ಉದ್ದೇಶಗಳನ್ನು ಮುಂದಿಟ್ಟುಕೊಂಡು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಗೌಡರ ಯಾನೆ ಒಕ್ಕಲಿಗರ ಮಾತೃ ಸಂಘ ಸ್ಥಾಪನೆ ಆಗಿದೆ ಎಂದು ಗೌಡ ಸಂಘದ ಸ್ಥಾಪಕ ಅಧ್ಯಕ್ಷರ ದ.ಕ.ಜಿಲ್ಲಾ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಕೆ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 5 ಲಕ್ಷಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಗೌಡ- ಒಕ್ಕಲಿಗ ಬಾಂಧವರಿದ್ದಾರೆ. ಅಂದಾಜು 2.5 ಲಕ್ಷಕ್ಕಿಂತಲೂ ಅಧಿಕ ವಯಸ್ಕ ಮತದಾರರಿದ್ದಾರೆ. ರಾಜಕೀಯವಾಗಿ ಗುರುತಿಸಿಕೊಂಡ ಅನೇಕ ಮುಂಚೂಣಿ ನಾಯಕರೂ ಇದ್ದಾರೆ. ಹಲವು ಕ್ಷೇತ್ರಗಳಲ್ಲಿ ಗುರುತಿಸಿರುವುದು ನಮಗೆ ಹೆಮ್ಮೆ. ನಮ್ಮ ಸಂಘದಲ್ಲಿ ವಿದ್ಯಾವಂತರು ಇದ್ದಾರೆ. ಬೇರೆ ಬೇರೆ ಉದ್ಯೋಗದಲ್ಲಿ ಇದ್ದವರೂ ಇದ್ದಾರೆ. ಉದ್ಯೋಗ ಇಲ್ಲದವರೂ ಇದ್ದಾರೆ. ವಿದೇಶದಲ್ಲೂ ಇದ್ದಾರೆ. ಆದರೆ ಒಟ್ಟು ನಿಖವಾರದ ಅಂಕಿಸಂಖ್ಯೆ ಇಲ್ಲ. ಈ ನಿಟ್ಟಿನಲ್ಲಿ ಅವರನ್ನೆಲ್ಲ ಸಂಪರ್ಕ ಮಾಡಿಕೊಂಡು ನಮ್ಮ ಸಮುದಾಯದ ಅಂಕಿ ಅಂಶಗಳನ್ನು ಸಂಗ್ರಹಿಸುವ ಮೂಲಕ ಸಮೀಕ್ಷೆಯನ್ನು ನಾವು ಮಾಡುವ ಒಂದು ಉದ್ದೇಶವಾದರೆ ನಮ್ಮ ಕುಟುಂಬಗಳು, ಗೋತ್ರಗಳು, ತರವಾಡು ಮನೆತನಗಳನ್ನು ಗುರುತಿಸುವುದು ಆಗತ್ಯವಾಗಿದೆ. ಎಷ್ಟೋ ಮಂದಿಗೆ ನಮ್ಮ ಮೂಲ ತರವಾಡಿನ ಬಗ್ಗೆ ಅರಿವಿಲ್ಲ. ಸಮಾಜದಲ್ಲಿನ ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತುವುದು ಸಹಿತ ಹಲವು ಉತ್ತಮ ಉದ್ದೇಶಗಳನ್ನಿಟ್ಟು ಜಿಲ್ಲಾ ಮಾತ್ರ ಸಂಘವನ್ನು ಆರಂಭಿಸಿದ್ದೇವೆ. ದ.ಕ.ಜಿಲ್ಲೆಯ 6 ತಾಲೂಕುಗಳಿಗೆ ಪ್ರಾತಿನಿದ್ಯ ನೀಡಿ ಸಂಘ ಕಾರ್ಯ ಮಾಡುತ್ತದೆ. ತಾಲೂಕು ಸಂಘಗಳ ಸಮನ್ವಯಕರಾಗಿ ಒಟ್ಟು ಸೇರಿಸುವ ಕೆಲಸವನ್ನು ಮಾತೃ ಸಂಘ ಮಾಡುತ್ತದೆ. ಈ ಹಿಂದೆ ಮಾತೃ ಸಂಘ ಇರಲಿಲ್ಲ. ಈಗ ಅದರ ಅಗತ್ಯತೆಯನ್ನು ಮನಗಂಡು ಮಾತೃ ಸಂಘ ರಚನೆ ಮಾಡಿದ್ದೇವೆ ಎಂದು ಅವರು ಹೇಳಿದರು.
ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ವಕೀಲ ದಿನೇಶ್ ಮಡಪ್ಪಾಡಿ ಮಾತನಾಡಿ, 2018ರಲ್ಲಿ ಪ್ರಾರಂಭ ಮಾಡಿ ಈಗ ನೋಂದಾಯಿತವಾದಂತಹ ಸಂಸ್ಥೆಯಾಗಿರುವ ಜಿಲ್ಲಾ ಸಂಘದ ಕುರಿತು ಪ್ರಥಮ ಪತ್ರಿಕಾಗೋಷ್ಠಿಯನ್ನು ಪುತ್ತೂರಿನಲ್ಲಿ ಮಾಡುತ್ತಿದ್ದೇವೆ. ಜಿಲ್ಲೆಯ ಸುಳ್ಯ, ಮಂಗಳೂರು, ಪುತ್ತೂರು, ವಿಟ್ಲ- ಬಂಟ್ವಾಳ, ಬೆಳ್ತಂಗಡಿ, ಕಡಬ 6 ತಾಲೂಕುಗಳಿಗೆ 15ರಂದು ಸಮಾಜಕ್ಕೆ ದುಡಿದ ಅನುಭವಿ ಹಿರಿಯ / ಕಿರಿಯರನ್ನು ಗುರುತಿಸಿ ಒಟ್ಟು 24 ಸದಸ್ಯರ ಕಾರ್ಯಕಾರಿ ಸಮಿತಿ ಮತ್ತು 90 ಸದಸ್ಯರ ಆಡಳಿತ ಮಂಡಳಿ ರಚನೆಯಾಗಿದೆ.
ಜಿಲ್ಲಾಧ್ಯಕ್ಷರಾಗಿ ಲೋಕಯ್ಯ ಗೌಡ ಕೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಮಡಪ್ಪಾಡಿ, ಜಿಲ್ಲಾ ಉಪಾಧ್ಯಕ್ಷರಾಗಿ ನಿತ್ಯಾನಂದ ಮುಂಡೋಡಿ, ಕುಶಾಲಪ್ಪ ಗೌಡ ಪೂವಾಜೆ, ರಾಮದಾಸ್ ಗೌಡ ಎಸ್, ಲಿಂಗಪ್ಪ ಗೌಡ ವಿಟ್ಲ, ತಿಮ್ಮಪ್ಪ ಗೌಡ ಕುಂಡಡ್ಕ, ಜಿಲ್ಲಾ ಖಜಾಂಚಿಯಾಗಿ ಪದ್ಮ ಗೌಡ ಬೆಳಾಲು, ಜಿಲ್ಲಾ ಕಾರ್ಯದರ್ಶಿಗಳಾಗಿ ಕೆ.ರಾಮಣ್ಣ, ಗೌಡ ಕೊಂಡಬಾಯಿ, ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ಗೌರವ ಸಲಹೆಗಾರರಾಗಿ ಸುಳ್ಯಕ್ಕೆ ಭರತ್ ಮುಂಡೋಡಿ, ಎನ್.ಎ ರಾಮಚಂದ್ರ, ಜಾಕೆ ಮಾಧವ ಗೌಡ, ಮಂಗಳೂರಿಗೆ ಪೂರ್ಣಿಮಾ ಕೆ.ಎಮ್, ಬಿ.ಕೆ ಕುಸುಮಾಧರ ಬೇರ್ಯ, ಪುತ್ತೂರಿಗೆ ಮೋಹನ್ ಗೌಡ ಇಡ್ಯಡ್ಕ, ಗಂಗಾಧರ ಗೌಡ ಕಮ್ಮಾರ, ವಿಟ್ಲ -ಬಂಟ್ವಾಳಕ್ಕೆ ಚಂದ್ರಶೇಖರ್ ಗೌಡ, ಕೆ.ರಾಮಣ್ಣ ಗೌಡ, ಬೆಳ್ತಂಗಡಿಗೆ ಸೋಮೇಗೌಡ, ಕಡಬಕ್ಕೆ ಜನಾರ್ದನ ಮಾಸ್ಟರ್, ಆಡಳಿತ ಮಂಡಳಿ ಮತ್ತು ಕಾರ್ಯಕಾರಿ ಸಮಿತಿ ನಿರ್ದೇಶಕರಾಗಿ ಸುಳ್ಳಕ್ಕೆ ಚಂದ್ರ ಕೋಲ್ಕಾರ್, ಲತಾ ಪ್ರಸಾದ್ ಕುದ್ಮಾಜಿ, ಬೆಳ್ತಂಗಡಿಗೆ ದಯಾನಂದ ಗೌಡ ಟಿ, ಗಣೇಶ್ ಗೌಡ, ಮಂಗಳೂರಿಗೆ ಪದ ನಾಗ ಅತಾಡಿ ಬಾಲಕಷ್ಣ ಗೌಡ ಬಿ. ವಿಟ್ಲ -ಬಂಟಾಳಕ್ಕೆ ಕೆ.ಮೋನಪ್ಪ ಗೌಡ, ಮೋಹನ್ ಗೌಡ ಕೆ, ಧರ್ಮಾವತಿ ಪಿ.ಬಿ, ಪುತ್ತೂರಿಗೆ ಯಸ್ ಪಿ ಮುರಲೀಧರ ಕಮ್ಮಾರ, ಐ.ಸಿ.ಕೈಲಾಸ್, ಕಡಬಕ್ಕೆ ನಾಗೇಶ್ ಕೆ. ಸರೋಜಿನಿ ಎಂ.ಜಿ, ಸುಂದರ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಉಳಿದಂತೆ 66 ಮಂದಿ ಅಡಳಿತ ಮಂಡಳಿ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರೂ ಮತ್ತು ಜಿಲ್ಲಾ ಸಂಘದ ಉಪಾಧ್ಯಕ್ಷರೂ ಆಗಿರುವ ಕುಶಾಲಪ್ಪ ಗೌಡ ಪೂವಾಜಿ, ಕಡಬ ತಾಲೂಕು ಸಂಘದ ಉಪಾಧ್ಯಕ್ಷರೂ ಮತ್ತು ಜಿಲ್ಲಾ ಸಂಘದ ಉಪಾಧ್ಯಕ್ಷರೂ ಆಗಿರುವ ತಿಮ್ಮಪ್ಪ ಗೌಡ ಕುಂಡಡ್ಕ ಕಡಬ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯರು ಮತ್ತು ನಿವೃತ್ತ ಎಸ್ಪಿ ಆಗಿರುವ ರಾಮದಾಸ್ ಗೌಡ ಎಸ್., ಕರ್ನಾಟಕ ಅರೆಭಾಷೆ ಅಕಾಡೆಮಿಯ ಸದಸ್ಯೆಯಾಗಿರುವ ಜಿಲ್ಲಾ ಗೌಡ ಸಂಘದ ಕಾರ್ಯಕಾರಿ ಸಮಿತಿಯ ನಿರ್ದೇಶಕಿ ಲತಾಪ್ರಸಾದ್ ಕುದ್ಮಾಜಿ, ಜಿಲ್ಲಾ ಕಾರ್ಯದರ್ಶಿಗಳಾದ ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ಕೆ.ರಾಮಣ್ಣ ಗೌಡ ಕೊಂಡಬಾಯಿ ಮಂಗಳೂರು, ಜಿಲ್ಲಾ ಉಪಾಧ್ಯಕ್ಷ ಕೆ ಲಿಂಗಪ್ಪ ಗೌಡ ವಿಟ್ಲ, ವಿಟ್ಲ-ಬಂಟ್ವಾಳದ ಸಿ ಕುಶಾಲಪ್ಪ ಚೆನ್ನಕಜೆ, ಕಾರ್ಯಕಾರಿ ಸಮಿತಿ ಸದಸ್ಯ ಮೋಹನ್ ಗೌಡ ಉಪಸ್ಥಿತರಿದ್ದರು.