ಪುತ್ತೂರು: ಬಾಲಕಿಯೋರ್ವಳ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನರಸಿಂಹ ಪ್ರಸಾದ್ ಪಾಂಗಣ್ಣಾಯ ಪೋಕ್ಸೋ ಪ್ರಕರಣದಲ್ಲಿ ಇದೀಗ ಜೈಲು ಸೇರಿದ್ದಾರೆ.
ಪಾಂಗಣ್ಣಾಯರು ಈ ಹಿಂದೆ ಕೂಡಾ ವಿವಾಹಿತ ಮಹಿಳೆಯೊಬ್ಬರ ಜತೆ ಅನೈತಿಕ ಸಂಬಂಧ ಹೊಂದಿ ಸಿಕ್ಕಿಬಿದ್ದ ಪ್ರಕರಣವೂ ನಡೆದಿದೆ. ಬಳಿಕ ಈ ವಿವಾಹಿತ ಮಹಿಳೆಯ ಕುಟುಂಬ ಬೇರ್ಪಟ್ಟಿತ್ತು. ಈ ರೀತಿ ಬೇರೆ ಬೇರೆ ಪ್ರಕರಣ ನಡೆಸುತ್ತಿದ್ದರು ಎಂದು ಸ್ಥಳೀಯರು ಹೇಳಿಕೊಳ್ಳುತ್ತಿದ್ದಾರೆ.
ಪಾಂಗಣ್ಣಾಯರು ಜ್ಯೋತಿಷಿಯಾಗಿ, ಪುರೋಹಿತರಾಗಿ, ತಂತ್ರಿಗಳಾಗಿ ಬೇರೆ ಬೇರೆ ತಾಲೂಕುಗಳಲ್ಲಿ ಕಾರ್ಯಕ್ರಮಗಳಿಗೆ ಭೇಟಿ ನೀಡುವ ಸಂದರ್ಭ ಮುಗ್ಧ ಹೆಣ್ಣುಮಕ್ಕಳನ್ನು ಈ ರೀತಿ ಬಳಸಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.