ನಾಳೆ (ಸೆ.20) : ಈ ಪ್ರದೇಶದಲ್ಲಿ ವಿದ್ಯುತ್‍ ನಿಲುಗಡೆ | ಎಲ್ಲೆಲ್ಲಿ ?

ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 33/11 ಕೆವಿ ಕ್ಯಾಂಪ್ಕೋ ವಿದ್ಯುತ್ ಉಪಕೇಂದ್ರದಲ್ಲಿ  ಸೆ.20 ಶುಕ್ರವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರ ತನಕ ವಿದ್ಯುತ್ ನಿಲುಗಡೆ ಮಾಡಲಾಗುವುದು.

ಕ್ಯಾಂಪ್ಕೋ ಉಪಕೇಂದ್ರದಿಂದ ಹೊರಡುವ ಮುಕ್ವೆ, ಮುಕ್ರಂಪಾಡಿ, ಕೆಮ್ಮಿಂಜೆ ಹಾಗೂ ಮುಂಡೂರು ಫೀಡರ್‍ ನಲ್ಲಿ ವಿದ್ಯುತ್ ನಿಲುಗಡೆಗೊಳ್ಳಲಿದೆ.

ಆದ್ದರಿಂದ 33/11 ಕೆವಿ ಕ್ಯಾಂಪ್ಕೋ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‍ ನಿಂದ ವಿದ್ಯುತ್ ಸರಬರಾಜಾಗುವ ಮುಕ್ವೆ, ಮಂಡೂರು, ಕೆಮ್ಮಿಂಜೆ ಹಾಗೂ ಆರ್ಯಾಪು ಗ್ರಾಮದ ವಿದ್ಯುತ್ ಬಳಕೆದಾರರು ಗಮನಿಸಬೇಕಾಗಿ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top