ಸವಣೂರು: ಬಿಜೆಪಿ ಬೂತ್ ಸಮಿತಿ 66-ಮೊಗರು ಹಾಗೂ 65-ಸವಣೂರು ಜಂಟಿ ಆಶ್ರಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 74ನೇ ಜನ್ಮದಿನಾಚರಣೆಯ ಅಂಗವಾಗಿ ಸವಣೂರು ಗ್ರಾಮದ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಮೋದಿ ಅವರ ಆರೋಗ್ಯವೃದ್ಧಿ ಹಾಗೂ ಪ್ರಧಾನಿ ಹುದ್ದೆಯಲ್ಲಿ ಆಡಳಿತ ನಡೆಸಲು ಇನ್ನು ಹೆಚ್ಚಿನ ಶಕ್ತಿ ಸಿಗಲು ಪ್ರಾಥನೆಯೊಂದಿಗೆ ದೇವರಿಗೆ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸುಳ್ಯ ಮಂಡಲ ಎಸ್.ಟಿ. ಮೋರ್ಚಾದ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಮಂಡಲ ಸದಸ್ಯ ತಾರಾನಾಥ ಕಾಯರ್ಗ, ಸವಣೂರು ಶಕ್ತಿ ಕೇಂದ್ರದ ಅಧ್ಯಕ್ಷ ಚೇತನ್ ಕುಮಾರ್ ಕೊಡಿಬೈಲ್, ಸವಣೂರು ಹಾಲು ಉತ್ಪಧಕರ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಭಟ್ ಕುಕ್ಕುಜೆ, ಅರ್ಚಕ ಪದ್ಮನಾಭ ಕುಂಜಾತ್ತಾಯ, ಬೂತ್ ಸಮಿತಿ 65 ರ ಕಾರ್ಯದರ್ಶಿ ಸತೀಶ್ ಬಲ್ಯಾಯ, ಬೂತ್ ಸಮಿತಿ 66 ರ ಅಧ್ಯಕ್ಷ ರಾಜೇಶ್ ಇಡ್ಯಾಡಿ, ಕಾರ್ಯದರ್ಶಿ ಹಿತೇಶ್ ಮೆದು, ಮಾಜಿ ಕಾರ್ಯದರ್ಶಿ ದಯಾನಂದ ಮೆದು, ಹಿರಿಯ ಕಾರ್ಯಕರ್ತ ಶಿವರಾಮ ಗೌಡ ಮೆದು, ಸದಸ್ಯರಾದ ಚಂದ್ರಶೇಖರ ಮೆದು, ಜಗದೀಶ್ ಗೌಡ ಇಡ್ಯಾಡಿ, ಯೋಗೀಶ್ ಇಡ್ಯಾಡಿ, ಪ್ರವೀಣ್ ಪೆರಿಯಡ್ಕ, ದಿವಾಕರ ಬಸ್ತಿ ಉಪಸ್ಥಿತರಿದ್ದರು.