ಪುತ್ತೂರು: ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಪುತ್ತೂರು ಸೆಂಟರ್ ಆಶ್ರಯದಲ್ಲಿ ಇಂಜನಿಯರ್ ದಿನಾಚರಣೆ ಪ್ರಯುಕ್ತ ಸೋಮವಾರ ಸಂಜೆ ಪುತ್ತೂರಿನಲ್ಲಿ ಆಕರ್ಷಕ ವಾಕಥಾನ್ ನಡೆಯಿತು.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯ ಗಾಂಧಿ ಕಟ್ಟೆಯ ಎದುರು ಪುತ್ತೂರು ಡಿವೈಎಸ್‌ಪಿ ಅರುಣ್ ನಾಗೇಗೌಡ ವಾಕಥಾನ್‌ಗೆ ಎಸಿಸಿಇ(ಐ) ಲಾಂಛನವಿರುವ ಧ್ವಜ ಹಿಡಿದು ಚಾಲನೆ ನೀಡಿದರು.
ಬಳಿಕ ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಪುತ್ತೂರು ಸೆಂಟರ್‌ನ ಸದಸ್ಯ ಎಂಜಿನಿಯರ್‌ಗಳು ಕಾಲ್ನಡಿಗೆಯಲ್ಲಿ ಮುಖ್ಯರಸ್ತೆಯಲ್ಲಿ ಸಾಗಿದರು. ಬಸ್ ನಿಲ್ದಾಣದಿಂದ ಹೊರಟ ವಾಕಥಾನ್ ಬೊಳುವಾರಿನಲ್ಲಿ ಸಮಾಪನಗೊಂಡಿತು. ಸರ್. ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರವಿರುವ ಸಾಲಂಕೃತ ವಾಹನದ ಜತೆಯಲ್ಲಿ ಬಿಳಿ ಟಿಶರ್ಟ್ ಮತ್ತು ಹಳದಿ ಟೊಪ್ಪಿ ಧರಿಸಿದ ಎಂಜಿನಿಯರ್‌ಗಳು ಕಾಲ್ನಡಿಗೆಯಲ್ಲಿ ಪಾಲ್ಗೊಂಡರು.
ವಾಕಥಾನ್‌ನಲ್ಲಿ ಪುತ್ತೂರು ಸೆಂಟರ್ ಅಧ್ಯಕ್ಷ ಪ್ರಮೋದ್ ಕುಮಾರ್ ಕೆ.ಕೆ,, ಕಾರ್ಯದರ್ಶಿ ವಿನೋದ್ ಕುಮಾರ್ ಕೆ., ಕೋಶಾಧಿಕಾರಿ ಚೇತನ್, ಆಡಳಿತ ಸಮಿತಿ ಸದಸ್ಯರಾದ ವೆಂಟಕರಾಜ್ ಪಿ.ಜಿ., ಪ್ರಶಾಂತ್, ಚಂದ್ರಶೇಖರ ಆಳ್ವಾ ಎ.ಸಿ. ನೇತೃತ್ವ ವಹಿಸಿದ್ದರು. ವಾಕಥಾನ್ ನ ಕೊನೆಯಲ್ಲಿ ಸಂಜೆ ದರ್ಬೆ ಅಶ್ವಿನಿ ಸಭಾಂಗಣದಲ್ಲಿ ಎಂಜಿನಿಯರ್ ದಿನಾಚರಣೆ, ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.