ಪುತ್ತೂರು: ಹಿಂದೂ ಸಮಾಜ ಮೌನವಾಗಿದೆ, ಎದ್ದು ನಿಲ್ಲಲ್ಲ ಎಂದು ಭಾವಿಸಿ ಈ ರೀತಿ ನಾಲಿಗೆ ಹರಿಬಿಟ್ಟು ಹಿಂದೂ ಸಮಾಜಕ್ಕೆ ಸವಾಲು ಹಾಕಿದ್ರೆ ಅದೂ ನಿಮ್ಮ ಮೂರ್ಖತನ. ಹಿಂದೂ ಸಮಾಜ ತಾಳ್ಮೆ ಕಳೆದುಕೊಂಡು ಕ್ರಿಯೆಗೆ ಪ್ರತಿಕ್ರಿಯೆ ನೀಡಲು ಹೊರಟರೆ ಏನಾಗಬಹುದೂ ಎಂದೂ ಕರಾವಳಿಯ ಇತಿಹಾಸವನ್ನು ತಿರುಗಿ ನೋಡಿಕೊಂಡರೆ ಒಳಿತು ಎಂದು ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಿಂದೂ ನಾಯಕ ಶರಣ್ ಪಂಪುವೆಲ್ ರವರಿಗೆ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಸವಾಲು ಹಾಕಿದ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಷರೀಫ್ ಅವರ ನಡೆಯನ್ನು ಖಂಡಿಸಿ, ಮತೀಯವಾದಿ ದೇಶದ್ರೋಹಿ ಸಂಘಟನೆಗಳ ಬೆಂಬಲದಿಂದ ಜನಪ್ರತಿನಿಧಿಯಾಗಿ ಇದ್ದುಕೊಂಡು ದೇಶದ್ರೋಹಿ ಸಂಘಟನೆಗಳ ಋಣ ಸಂದಾಯ ಮಾಡಲು ಈ ರೀತಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಮಟ್ಟಿಗೆ ಹೇಳಿಕೆಗಳನ್ನು ನೀಡುವುದು ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ.
ಪೋಲಿಸ್ ಇಲಾಖೆ ಇಂಥವರ ಹಾಗೂ ಇವರನ್ನು ಪ್ರೇರೆಪಿಸುವವರ ವಿರುದ್ಧ ಅಗತ್ಯ ಕಾನೂನು ರೀತಿಯ ಕ್ರಮವನ್ನು ಜರುಗಿಸಿ ಇಂತವರಿಂದ ಸಮಾಜವನ್ನು ರಕ್ಷಿಸಬೇಕು ಎಂದು ದಯಾನಂದ ಶೆಟ್ಟಿ ಉಜಿರೆಮಾರು ತಿಳಿಸಿದ್ದಾರೆ.